alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಮುಟ್ಟಿನ ಚಿತ್ರ ಬಿಡಿಸಿದ ಐದು ವರ್ಷದ ಬಾಲಕ..!

42d6016500000578-0-image-a-8_1501463716154

ಎಲ್ಲ ಮಕ್ಕಳಂತೆ ಐದು ವರ್ಷದ ಈ ಬಾಲಕ ಕೂಡ ಚಿತ್ರ ಬಿಡಿಸಿದ್ದಾನೆ. ತಂದೆ, ತಾಯಿ ಹಾಗೂ ತನ್ನ ಚಿತ್ರವನ್ನೂ ಬಿಡಿಸಿದ್ದಾನೆ. ಆತ ಬಿಡಿಸಿರುವ ಚಿತ್ರದಲ್ಲಿ ಒಂದು ಆಶ್ಚರ್ಯಕರ ವಿಷ್ಯವಿದೆ. ಅದು ತಾಯಿ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ತಾಯಿ ಕೇಳಿದಾಗ ಮಗ ನೀಡಿದ ಉತ್ತರ ಮತ್ತೂ ಆಶ್ಚರ್ಯ ಹುಟ್ಟಿಸುವಂತಿದೆ.

ಬಾಲಕ ಬಿಡಿಸಿರುವ ತಾಯಿ ಚಿತ್ರದಲ್ಲಿ ಕೆಂಪು ಬಣ್ಣವೊಂದಿದೆ. ಇದೇನು ಎಂಬ ತಾಯಿ ಪ್ರಶ್ನೆಗೆ ಇದು ನಿನ್ನ ಪಿರಿಯಡ್ ಎಂದಿದ್ದಾನೆ ಬಾಲಕ. ಸಾಮಾನ್ಯವಾಗಿ ಮುಟ್ಟಿನ ವಿಚಾರವನ್ನು ಎಲ್ಲೂ ಬಹಿರಂಗವಾಗಿ ಹೇಳುವುದಿಲ್ಲ. ಮನೆಯಲ್ಲಿರುವ ಮಹಿಳೆಗೆ ಬಿಟ್ಟರೆ ಮತ್ಯಾರಿಗೂ ಈ ವಿಷ್ಯ ತಿಳಿದಿರುವುದಿಲ್ಲ. ಟಿವಿಗಳಲ್ಲಿ ಜಾಹೀರಾತು ಬರುತ್ತಿದ್ದರೂ, ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಪ್ಯಾಡ್ ಮಾರಾಟ ಮಾಡುತ್ತಿದ್ದರೂ ಮನೆಯಲ್ಲಿ ಮಾತ್ರ ಈ ವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅದ್ರಲ್ಲೂ ಐದು ವರ್ಷದ ಬಾಲಕನಿಗೆ ಈ ಬಗ್ಗೆ ತಿಳಿಯಲು ಸಾಧ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಮುಟ್ಟಿನ ಮೊದಲ ದಿನ ಕೆಲ ಕಂಪನಿಗಳು ರಜೆ ನೀಡ್ತಾ ಇವೆ. ಪ್ಯಾಡ್ ಮ್ಯಾನ್ ನಂತಹ ಚಿತ್ರ ಬರ್ತಿರುವ ಕಾಲದಲ್ಲಿ ಐದು ವರ್ಷದ ಬಾಲಕ ಈ ಬಗ್ಗೆ ತಿಳಿದಿರುವುದು ದೊಡ್ಡ ಹಾಗೂ ಪ್ರಶಂಸನೀಯ ವಿಷ್ಯ. ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಪೆನ್ನಿ ರೊಹೆಲ್ಡರ್ ತನ್ನ ಮಗ ಬರೆದಿದ್ದ ಈ ಚಿತ್ರವನ್ನು ಪೋಸ್ಟ್ ಮಾಡಿ ಬ್ಲಾಗ್ ಬರೆದಿದ್ದಳು. ಅದೀಗ ವಿಶ್ವದಾದ್ಯಂತ ಚರ್ಚೆಯಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...