alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಜಿನ್ ಅಲ್ಲದ ಗರ್ಲ್ ಫ್ರೆಂಡ್, ಕೊಚ್ಚಿ ಕೊಂದ ಬಾಕ್ಸರ್

ಹುಡುಗಿ ಸುಳ್ಳು ಸಾವಿಗೆ ಕಾರಣವಾಗಿದೆ. ವರ್ಜಿನ್ ಅಲ್ಲ ಎಂಬ ವಿಚಾರವನ್ನು ಹುಡುಗಿ ಮುಚ್ಚಿಟ್ಟಿದ್ದಳು. ಇದು ಗೊತ್ತಾಗ್ತಿದ್ದಂತೆ ಕೋಪಗೊಂಡ ಹುಡುಗ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಶವವನ್ನು ಕತ್ತರಿಸಿದ್ದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ತೈವಾನ್ ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಗೌರಿ ಚು ಎಂದು ಪೊಲೀಸರು ತಿಳಿಸಿದ್ದಾರೆ. ಆತ ಎಂಎಂಎನಲ್ಲಿ ಬಾಕ್ಸರ್ ಆಗಿದ್ದ. ಡೇಟಿಂಗ್ ಸೈಟ್ ನಲ್ಲಿ ಯಿ ಮಿನ್ ಹುವಾಂಗ್ ಸ್ನೇಹ ಬೆಳೆದಿತ್ತು. ಮೇ ತಿಂಗಳಿನಲ್ಲಿ ಹುವಾಂಗ್ ವರ್ಜಿನ್ ಅಲ್ಲ ಎಂಬ ಸಂಗತಿ ಗೌರಿ ಚುಗೆ ಗೊತ್ತಾಗಿದೆ.

ಸಿಸಿ ಟಿವಿಯಲ್ಲಿ ಇಬ್ಬರು ಚು ಫ್ಲಾಟ್ ಗೆ ಹೋಗ್ತಿರುವುದು ರೆಕಾರ್ಡ್ ಆಗಿದೆ. ಸೂಸೈಡ್ ನೋಟ್ ನಲ್ಲಿ ಆಕೆ ನನಗೆ ಮೋಸ ಮಾಡಿದ್ದಳು ಎಂದು ಚು ಬರೆದಿದ್ದಾನೆ. ಹತ್ಯೆ ಮಾಡಿ ಹೆಣವನ್ನು ಅಡಗಿಸಿಟ್ಟ ಮೂರ್ನಾಲ್ಕು ದಿನಗಳ ನಂತ್ರ ಚು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. ಫೇಸ್ಬುಕ್ ನಲ್ಲಿ ಕೂಡ ಹತ್ಯೆ ನಂತ್ರ ಹುವಾಂಗ್ ಮೋಸದ ಬಗ್ಗೆ ಚು ಬರೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...