alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಸಹಿಯುಳ್ಳ ವಿಸ್ಕಿ ಬಾಟಲಿಗೆ ಫುಲ್ ಡಿಮ್ಯಾಂಡ್

whisky

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಇರುವ ವಿಸ್ಕಿ ಬಾಟಲಿಗೆ ಲಂಡನ್ ನಲ್ಲಿ ಭಾರೀ ಬೇಡಿಕೆ ಇದೆ. ಒಂದು ಬಾಟಲ್ ವಿಸ್ಕಿ 7334 ಡಾಲರ್ ಅಂದ್ರೆ ಸುಮಾರು 5 ಲಕ್ಷ ರೂಪಾಯಿಗೆ ಹರಾಜಾಗಿದೆ. 2012ರಲ್ಲಿ ಡೊನಾಲ್ಡ್ ಟ್ರಂಪ್ ‘ಗ್ಲೆನ್ ಡ್ರೋನಚ್’ ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲಿಗಳ ಮೇಲೆ ಸಹಿ ಮಾಡಿದ್ದರು.

ಬೆರ್ದೀನ್ ಶೈರ್ ನಲ್ಲಿ ನಡೆದ ‘ಟ್ರಂಪ್ ಇಂಟರ್ ನ್ಯಾಶನಲ್ ಗಾಲ್ಫ್ ಲಿಂಕ್’ ಉದ್ಘಾಟನಾ ಸಮಾರಂಭದಲ್ಲಿ ಗಿಫ್ಟ್ ಬಾಕ್ಸ್ ಆಗಿ ತರಲಾಗಿದ್ದ ವಿಸ್ಕಿ ಬಾಟಲಿ ಮೇಲೆ ಟ್ರಂಪ್ ಸಹಿ ಹಾಕಿದ್ದರು.

ಗ್ಲಾಸ್ಗೋನಲ್ಲಿ ಈ ವಿಸ್ಕಿ ಬಾಟಲಿಯನ್ನು ಹರಾಜು ಹಾಕಲಾಗಿದೆ. ಕೆನಡಾದ ವ್ಯಕ್ತಿಯೊಬ್ಬ ಇದನ್ನು 7334 ಅಮೆರಿಕನ್ ಡಾಲರ್ ಕೊಟ್ಟು ಕೊಂಡುಕೊಂಡಿದ್ದಾನೆ. ಗ್ಲೆನ್ ಡ್ರೋನಚ್ ಕಂಪನಿಯ ವಿಸ್ಕಿ ಅದ್ಭುತವಾಗಿದ್ದು, ಟ್ರಂಪ್ ಸಹಿಯಿಂದ ಅದಕ್ಕೆ ಇನ್ನಷ್ಟು ಮಹತ್ವ ಬಂದಿದೆ ಅಂತಾ ವಿಸ್ಕಿ ತಜ್ಞ ಲೌರಿ ಬ್ಲಾಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...