alex Certify
ಕನ್ನಡ ದುನಿಯಾ       Mobile App
       

Kannada Duniya

ಆಫೀಸಿಗೆ ಬರೋದು ಲೇಟಾಗುತ್ತೆ ಎಂದಾಕೆಗೆ ಬಾಸ್ ಹೇಳಿದ್ದೇನು?

ನೌಕರರು ಲೇಟಾಗಿ ಆಫೀಸಿಗೆ ಬರ್ತಾರೆ ಅಂದ್ರೆ ಸಿಟ್ಟು ಮಾಡಿಕೊಳ್ಳದಿರೋ ಬಾಸ್ ಯಾರಾದ್ರೂ ಇದ್ದಾರಾ ಹೇಳಿ….ಬಹುತೇಕ ಬಾಸ್ ಗಳೆಲ್ಲ ಕೆರಳಿ ಕೆಂಡಾಮಂಡಲವಾಗೋದು ಗ್ಯಾರಂಟಿ. ಆದ್ರೆ ಇಲ್ಲೊಬ್ಬ ಬಾಸ್ ಹಾಗಲ್ಲ.

ಬಾಸ್ ಕೇಯಿನ್ ಮೊಲಿರ್ ಎಂಬಾತನಿಗೆ ಆತನ ಉದ್ಯೋಗಿ ಜೆನ್ ಎಂಬಾಕೆ ಬೆಳಗ್ಗೆ ಮೆಸೇಜ್ ಮಾಡಿದ್ದಳು. ಇವತ್ತು ಆಫೀಸಿಗೆ ಕೆಲ ನಿಮಿಷ ತಡವಾಗಿ ಬರುತ್ತೇನೆ. ಕಾರಣ, ನಾ ಹೊರಡೋ ಟೈಮಲ್ಲಿ ನಮ್ಮನೆ ನಾಯಿಮರಿ ಮಲಗಿತ್ತು ಮತ್ತು ತುಂಬಾ ಕ್ಯೂಟಾಗಿ ಕಾಣಿಸ್ತಿತ್ತು. ಹೀಗಾಗಿ ಅದರೊಂದಿಗೆ ಕೆಲ ಪೋಟೋಗಳನ್ನು ತೆಗೆಸಿಕೊಂಡು ಬರಲು ಲೇಟಾಗುತ್ತದೆ ಎಂಬುದಾಗಿ ಮೆಸೇಜ್ ಮಾಡಿದ್ದಳು. ಜೊತೆಗೆ ನಾಯಿ ಜೊತೆಗೆ ತೆಗೆಸಿಕೊಂಡ ಪೋಟೋವನ್ನೂ ಕಳುಹಿಸಿದ್ದಳು.

ಇದಕ್ಕೆ ಸಿಟ್ಟಿಗೇಳಬೇಕಿದ್ದ ಬಾಸ್ ಹೃದಯ ಕರಗಿಹೋಗಿತ್ತು. ನಾಯಿ ಎಷ್ಟು ಎನ್ನಾಗಿದೆ ಎಂದಿದ್ದಲ್ಲದೇ ನೀವು ಎಷ್ಟು ಹೊತ್ತಿಗಾದರೂ ಆಫೀಸಿಗೆ ಬರಬಹುದು ಎಂದು ರಿಪ್ಲೈ ಮಾಡಿದ್ದಾರೆ. ಈ ಸಂಭಾಷಣೆಯ ಸ್ನಾಪ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದಕ್ಕೆ ಸಾಕಷ್ಟು ಲೈಕ್, ಕಮೆಂಟ್ ಬಂದಿದೆ. ಅನೇಕರು ತಮಗೂ ಇಂಥ ಬಾಸ್ ಇರಬೇಕಿತ್ತು ಎಂದುಕೊಂಡಿರೋದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...