alex Certify
ಕನ್ನಡ ದುನಿಯಾ       Mobile App
       

Kannada Duniya

ಮನಿಲಾದಲ್ಲಿ ಬಾಂಬ್‌ ಸ್ಫೋಟಕ್ಕೆ 2 ಸಾವು, 37 ಮಂದಿಗೆ ಗಾಯ

ಮನಿಲಾ: ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ನಾಡಬಾಂಬ್‌ ಸ್ಫೋಟಕ್ಕೆ ಇಬ್ಬರು ಬಲಿಯಾಗಿ, 37 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಫಿಲಿಪೈನ್ಸ್‌ನಲ್ಲಿನ ಸುಲ್ತಾನದ ಕುದುರತ್‌ ಪ್ರಾಂತ್ಯದಲ್ಲಿ ಸ್ಥಳೀಯ ಹಬ್ಬದ ವೇಳೆ ಘಟನೆ ನಡೆದಿದೆ. ಇಸುಲಾನ್‌ ಹೈವೇಯ ಬಟ್ಟೆ ಅಂಗಡಿಯ ಎದುರು ಭಾಗದಲ್ಲಿ ಬಾಂಬ್‌ ಸ್ಫೋಟಗೊಂಡಿದೆ.

ಈ ವರೆಗೆ ಯಾವುದೇ ಸಂಘಟನೆ ಸ್ಫೋಟದ ಜವಾಬ್ದಾರಿ ಹೊತ್ತುಕೊಂಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಫಿಲಿಪೈನ್ಸ್‌ನ 2ನೇ ದೊಡ್ಡ ಪ್ರಾಂತ್ಯವಾಗಿರುವ ಈ ಭಾಗದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌ನಿಂದ ಪ್ರಭಾವಿತರಾದ ಅನೇಕ ಸಂಘಟನೆಗಳು, ಮಾವೋವಾದಿ ಸಂಘಟನೆಗಳೂ ಚಟುವಟಿಕೆಯಿಂದಿವೆ ಎನ್ನಲಾಗಿದೆ.

ಬಂಗಸೊಮೊರೊ ಇಸ್ಲಾಮಿಕ್‌ ಫ್ರೀಡಂ ಫೈಟರ್ಸ್‌(ಬಿಐಎಫ್‌ಎಫ್‌) ಈ ಕೃತ್ಯದ ಹಿಂದಿರುವ ಸಾಧ್ಯತೆ ಇದೆ ಎಂದು ಸೇನೆಯ ಆರನೇ ವಿಭಾಗದ ವಕ್ತಾರ ಆರ್ವಿನ್‌ ಎನ್‌ಸಿನಾಸ್‌ ತಿಳಿಸಿದ್ದಾರೆ.  ಕಳೆದ ತಿಂಗಳು ವ್ಯಾನ್‌ ಒಂದರಲ್ಲಿ ಬಾಂಬ್‌ ಇರಿಸಲಾಗಿತ್ತು. ಬಸಲಿನ್‌ನ ಚೆಕ್‌ ಪಾಯಿಂಟ್‌ನಲ್ಲಿ ಬಾಂಬ್‌ ಸಿಡಿದು ಒಟ್ಟಾರೆ 11 ಮಂದಿ ಸಾವನ್ನಪ್ಪಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...