alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಕರ ಹಿಮ ಬಿರುಗಾಳಿಗೆ ತತ್ತರಿಸಿದ ಅಮೆರಿಕ

ನ್ಯೂಯಾರ್ಕ್: ಕಳೆದ ವಾರದಿಂದ ಈಶಾನ್ಯ ಅಮೆರಿಕದ ವಾತಾವರಣ ಬದಲಾಗಿದ್ದು, ಭೀಕರವಾದ ಹಿಮ ಚಂಡಮಾರುತದ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

ಕೆಲವು ಕಡೆಗಳಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದ್ದು, ಚಳಿಯ ಹೊಡೆತಕ್ಕೆ 10 ಮಂದಿ ಬಲಿಯಾಗಿದ್ದಾರೆ. ಕರಾವಳಿ ಪ್ರದೇಶದ ನಗರ, ಪಟ್ಟಣದ ರಸ್ತೆಗಳ ತುಂಬೆಲ್ಲಾ ಹಿಮ ಬಿದ್ದಿದ್ದು, ಶ್ವೇತ ಮತ್ತು ಶೈತ್ಯ ವಾತಾವರಣದಿಂದ ಮಂಜುಗಡ್ಡೆಯಾಗಿ ಮಾರ್ಪಟ್ಟಿವೆ.

ರಸ್ತೆಯಲ್ಲಿ ಬಿದ್ದಿರುವ ಮಂಜುಗಡ್ಡೆಯನ್ನು ತೆರವುಗೊಳಿಸಲು ಸಮರೋಪಾದಿ ಕಾರ್ಯಾಚರಣೆ ನಡೆಸಲಾಗಿದೆ. ಉಷ್ಣಾಂಶ ಕುಸಿತದಿಂದ ಜನ ತತ್ತರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಬೋಸ್ಟನ್ ನಲ್ಲಿ 12 ಇಂಚು ಹಿಮ ಬಿದ್ದಿದೆ. ಮೇರಿಲ್ಯಾಂಡ್, ವರ್ಜಿನಿಯಾದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ಇಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...