alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಬ್ರೇಕ್ ಅಪ್ ವರ್ಷ 2016

download-1

ಹಳೆ ಕಹಿ ಘಟನೆಗಳನ್ನು ಮರೆತು ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧರಾಗ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಹೊಸವರ್ಷಾಚರಣೆಯ ತಯಾರಿಯಲ್ಲಿದ್ದಾರೆ.

2016 ರ ವಿಷಯ ಬಂದಾಗ ಮೊದಲು ನೆನಪಾಗೋದು ಬಾಲಿವುಡ್. ಬಾಲಿವುಡ್ ನಟ-ನಟಿಯರ ಖಾಸಗಿ ಬದುಕಿನಲ್ಲಿ ಇಣುಕಿ ನೋಡಲು ಅಭಿಮಾನಿಗಳು ಕಾತರರಾಗಿರ್ತಾರೆ. ತಮ್ಮ ನೆಚ್ಚಿನ ನಟರ ಸಂಸಾರ ಚೆನ್ನಾಗಿರಲಿ ಎಂದು ಆಶಿಸುವವರೂ ಇದ್ದಾರೆ. ಆದ್ರೆ ಈ ವರ್ಷ ಬಾಲಿವುಡ್ ನ ಅನೇಕ ಸ್ಟಾರ್ ಗಳ ಜೀವನ ಚೆನ್ನಾಗಿರಲಿಲ್ಲ. 2016 ನ್ನು ಬ್ರೇಕ್ ಅಪ್ ವರ್ಷ ಎಂದೇ ಕರೆಯಲಾಗ್ತಾ ಇದೆ.

ಬಾಲಿವುಡ್ ಬ್ರೇಕ್ ಅಪ್:

ರಣಬೀರ್ ಕಪೂರ್-ಕತ್ರಿನಾ ಕೈಫ್ : ಬಾಲಿವುಡ್ ನ ಹಾಟ್ ಜೋಡಿ ಎಂದೇ ಹೆಸರು ಗಳಿಸಿದ್ದ ರಣಬೀರ್ ಕಪೂರ್ ಹಾಗೂ ಕತ್ರಿನಾ ಬ್ರೇಕ್ ಅಪ್ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದು ಸುಳ್ಳಲ್ಲ. 2016 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎನ್ನಲಾಗಿತ್ತು. ಆದ್ರೆ ಆರಂಭದ ತಿಂಗಳುಗಳಲ್ಲಿಯೇ ಈ ಜೋಡಿ ದೂರವಾದ್ರು.

ಓಂ ಪುರಿ-ನಂದಿತಾ ಪುರಿ : ಬಾಲಿವುಡ್ ಹಿರಿಯ ನಟ ಓಂ ಪುರಿ ಮದುವೆಯಾಗಿ 26 ವರ್ಷಗಳಾದ ಬಳಿಕ ಪತ್ನಿ ನಂದಿತಾರಿಂದ ದೂರವಾಗುವ ನಿರ್ಧಾರ ಕೈಗೊಂಡಿದ್ದಾರೆ. ಓಂ ಪುರಿ ಜೀವನ ಚರಿತ್ರೆಯನ್ನು ಪತ್ನಿ ನಂದಿತಾ ಪುಸ್ತಕ ಮಾಡಿದ್ದು, ಇದೇ ಇವರ ಸಂಬಂಧ ಬಿರುಕು ಬಿಡಲು ಕಾರಣವಾಗಿದೆ.

ಕರೀಶ್ಮಾ-ಸಂಜಯ್ : 2014 ರಲ್ಲಿಯೇ ಈ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2016 ರಲ್ಲಿ ಕೋರ್ಟ್ ನಿಂದ ಬಿಡುಗಡೆ ಸಿಕ್ಕಿದೆ. ಮಕ್ಕಳ ಲಾಲನೆ-ಪಾಲನೆ ವಿಚಾರದಲ್ಲಿ ಶುರುವಾಗಿದ್ದ ಗೊಂದಲ ಕೂಡ ಬಗೆಹರಿದಿದೆ.

ಫರಾನ್ ಅಕ್ತರ್-ಅಧುನ್ : ಬಾಲಿವುಡ್ ನಟ, ನಿರ್ದೇಶಕ ಫರಾನ್ ಅಕ್ತರ್ ಗೆ 2016 ಉತ್ತಮವಾಗಿರಲಿಲ್ಲ. 15 ವರ್ಷಗಳ ದಾಂಪತ್ಯ ಮುರಿದುಬಿದ್ದಿದೆ. ಪರಸ್ಪರ ಒಪ್ಪಂದದ ಮೇಲೆ ಇಬ್ಬರೂ ಬೇರೆಯಾಗಿದ್ದಾರೆ.

ಹಿಮೇಶ್ ರೇಶಮಿಯಾ-ಕೋಮಲ್ : ನಟ, ಗಾಯಕ ಹಿಮೇಶ್ ರೇಶಮಿಯಾ ವಿಚ್ಛೇದನದ ಅರ್ಜಿ ಕೋರ್ಟ್ ನಲ್ಲಿದೆ. ಇಬ್ಬರು 22 ವರ್ಷಗಳ ಹಿಂದೆ ಮದುವೆಯಾಗಿದ್ದರು.

ಕರೀಶ್ಮಾ ತನ್ನಾ-ಉಪೇನ್ ಪಟೇಲ್ : ಬ್ರೇಕ್ ಅಪ್ ಲಿಸ್ಟ್ ನಲ್ಲಿ ಇವರಿಬ್ಬರ ಹೆಸರೂ ಇದೆ. ಬಿಗ್ ಬಾಸ್-8ರಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಉಪೇನ್ ಟ್ವೀಟರ್ ನಲ್ಲಿ ಬ್ರೇಕ್ ಅಪ್ ವಿಷಯ ತಿಳಿಸಿದ್ದಾರೆ.

ಮಲೈಕಾ –ಅರ್ಬಾಜ್ : ಈ ವರ್ಷದ ಆರಂಭದಲ್ಲಿಯೇ ಅಭಿಮಾನಿಗಳಿಗೆ ಶಾಕ್ ನೀಡಿದ ಜೋಡಿ ಮಲೈಕಾ ಅರೋರಾ ಹಾಗೂ ಅರ್ಬಾಜ್. ಜನವರಿ ತಿಂಗಳಿನಲ್ಲಿಯೇ ಇವರಿಬ್ಬರು ದೂರವಾದ ಸುದ್ದಿ ಬಂದಿತ್ತು. 18 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿರುವ ಮಲೈಕಾ ಬೇರೆ ಮನೆ ಮಾಡಿದ್ದಾಳೆ.

ಅಂಕಿತಾ-ಸುಶಾಂತ್ : 8 ವರ್ಷಗಳ ನಡೆಯುತ್ತಿದ್ದ ಪ್ರೀತಿ ಈ ವರ್ಷ ಕಟ್ ಆಗಿದೆ. ಅಂಕಿತಾ, ಸುಶಾಂತ್ ನಿಂದ ದೂರವಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...