alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ಕೆ.ಜಿ. ಮಾಂಸದ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ದಕ್ಷಿಣ ಅಮೆರಿಕಾದ ವೆನೆಜುವೆಲಾ ಇತಿಹಾಸದಲ್ಲಿ ಹಣದುಬ್ಬರ ಕೆಟ್ಟ ಪರಿಸ್ಥಿತಿ ತಲುಪಿದೆ. ಇಲ್ಲಿ ಒಂದು ಕಾಫಿ ಬೆಲೆ 25 ಲಕ್ಷಕ್ಕೆ (702 ರೂ.)  ಮಾರಾಟವಾಗ್ತಿದೆ. ಒಂದು ಕೆ.ಜಿ. ಟೋಮೋಟೋ ಬೆಲೆ ಐವತ್ತು ಲಕ್ಷ (1404 ರೂ.) ವಾಗಿದ್ದು, ದೇಶದ ಜನರು ಸಮಸ್ಯೆ ಎದುರಿಸುವಂತಾಗಿದೆ.

ದೇಶದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಂದು ಕೆ.ಜಿ. ಮಾಂಸದ ಬೆಲೆ 95 ಲಕ್ಷ (2672 ರೂ.) ಒಂದು ಕೆ.ಜಿ. ಆಲೂಗಡ್ಡೆ ಬೆಲೆ 20 ಲಕ್ಷವಾದ್ರೆ (562 ರೂ.) ಕ್ಯಾರೆಟ್ ಬೆಲೆ 30 ಲಕ್ಷ (843 ರೂ.) . ಅಕ್ಕಿ ಕೆ.ಜಿ. ಗೆ 25 ಲಕ್ಷ (702 ರೂ.)ಕ್ಕೆ ಮಾರಾಟವಾಗ್ತಿದ್ದರೆ ಪನ್ನೀರ್ ಬೆಲೆ ಪ್ರತಿ ಕೆ.ಜಿ.ಗೆ 75 ಲಕ್ಷ (2109).

ಇಷ್ಟಕ್ಕೆ ದಂಗಾದ್ರೆ ಹೇಗೆ? ದೇಶದಲ್ಲಿ ಒಂದು ಊಟದ ಥಾಲಿ ಬೆಲೆ ಕೇಳಿದ್ರೆ ಉಸಿರು ನಿಲ್ಲುತ್ತೆ. ಮಾಂಸದೂಟದ ಥಾಲಿಗೆ ಒಂದು ಕೋಟಿ (2811 ರೂ.) ಗಿಂತಲೂ ಹೆಚ್ಚು. ಭಾರತದ ಕರೆನ್ಸಿಗೆ ಹೋಲಿಸಿದ್ರೆ ಭಾರತೀಯರು ಕೆ.ಜಿ. ಟೋಮೋಟೋಗೆ ನೀಡುವ ಬೆಲೆಗಿಂತ 1000 ರೂಪಾಯಿಯನ್ನು ಅಲ್ಲಿನವರು ಹೆಚ್ಚಿಗೆ ನೀಡ್ತಿದ್ದಾರೆ. ಪ್ರತಿ 26 ದಿನಗಳಿಗೆ ವಸ್ತುಗಳ ಬೆಲೆ ದ್ವಿಗುಣವಾಗ್ತಿದೆಯಂತೆ.

ದೇಶದಲ್ಲಿ ಶೇಕಡಾ 90ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಇದ್ರಲ್ಲಿ ಶೇಕಡಾ 60 ರಷ್ಟು ಮಂದಿ ಹಸಿವಿನ ವಿರುದ್ಧ ಹೋರಾಡುತ್ತಿದ್ದಾರಂತೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಾದ ಬದಲಾವಣೆ ಆರ್ಥಿಕ ದುಸ್ಥಿತಿಗೆ ಕಾರಣವಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...