alex Certify
ಕನ್ನಡ ದುನಿಯಾ       Mobile App
       

Kannada Duniya

ದೇಹ ಹುರಿಗೊಳಿಸಲು ಎದೆ ಹಾಲು ಬಳಸುತ್ತಿದ್ದಾರೆ ಬಾಡಿ ಬಿಲ್ಡರ್ಸ್

ಲಂಡನ್ ಬಾಡಿ ಬಿಲ್ಡರ್ ಗಳು ತಮ್ಮ ದೇಹ ಹುರಿಗೊಳಿಸಲು ಎದೆ ಹಾಲಿನ ಮೊರೆ ಹೋಗುತ್ತಿದ್ದಾರಂತೆ. ಎದೆ ಹಾಲು ನೀಡಲು ಕೆಲವೊಂದು ಅಂತರ್ಜಾಲ ತಾಣಗಳಿದ್ದು, ಆನ್ ಲೈನ್ ನಲ್ಲಿ ಬುಕ್ ಮಾಡಿ ಇದನ್ನು ಪಡೆಯುತ್ತಿದ್ದಾರೆ.

1 ಔನ್ಸ್ ಗೆ 6 ಪೌಂಡ್ ಗಳವರೆಗೆ ಎದೆ ಹಾಲಿಗೆ ಬೆಲೆ ನಿಗದಿ ಮಾಡಲಾಗಿದ್ದು, ಅಷ್ಟು ಹಣ ತೆತ್ತು ಬಾಡಿ ಬಿಲ್ಡರ್ ಗಳು ಇದನ್ನು ಪಡೆಯುತ್ತಿದ್ದಾರಂತೆ. ಆಕಳ ಹಾಲಿಗಿಂತ ಎದೆ ಹಾಲು ಕುಡಿದರೆ ತಮ್ಮ ದೇಹ ಮತ್ತಷ್ಟು ಸದೃಢವಾಗುತ್ತದೆ ಎಂಬ ಕಾರಣಕ್ಕಾಗಿ ಬಾಡಿ ಬಿಲ್ಡರ್ ಗಳು ಇದಕ್ಕೆ ಮೊರೆ ಹೋಗಿದ್ದಾರೆ.

ಆದರೆ ತಜ್ಞರು ಮಾತ್ರ ಎದೆ ಹಾಲಿಗಿಂತ ಆಕಳ ಹಾಲಿನಲ್ಲೇ ಹೆಚ್ಚು ಪ್ರೋಟಿನ್ ಗಳಿರುತ್ತವೆ ಎನ್ನುತ್ತಾರಲ್ಲದೇ, ಆನ್ ಲೈನ್ ಜಾಲ ತಾಣಗಳು ಎದೆ ಹಾಲನ್ನು ಸೂಕ್ತವಾಗಿ ಸಂರಕ್ಷಿಸಿಡದಿದ್ದರೆ ಅಂತಹ ಹಾಲನ್ನು ಕುಡಿದ ವೇಳೆ ಆಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ. ಆದರೆ ಬಾಡಿ ಬಿಲ್ಡರ್ ಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ಎದೆ ಹಾಲಿಗೆ ಬೇಡಿಕೆ ಮಂಡಿಸುತ್ತಲೇ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...