alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ನಾಪತ್ತೆಯಾಗಿದ್ದ ಕುಟುಂಬದ ಎಲ್ಲ ಸದಸ್ಯರ ಮೃತದೇಹ ಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಎಲ್ಲ ಸದಸ್ಯರ ಶವ ಸಿಕ್ಕಿದೆ. 11 ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ  ಎಸ್ ಯು ವಿ ನದಿಗೆ ಕಾರು ಬಿದ್ದಿತ್ತು. ಅಂದಿನಿಂದ ಇಂದಿನವರೆಗೂ ಕುಟುಂಬಸ್ಥರ ಹುಡುಕಾಟ ನಡೆದಿತ್ತು.

ಸೆಂಟಾ ಕ್ಲಾರಿಟಿಯಲ್ಲಿ ವಾಸವಾಗಿದ್ದ ಗುಜರಾತ್ ಮೂಲದ ತೊಟ್ಟಪಿಳ್ಳಿ ಕುಟುಂಬ ಪ್ರವಾಸಕ್ಕೆಂದು ತೆರಳಿತ್ತು. ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳಿರುವ ಕಾರು ಎಸ್ ಯು ವಿ ನದಿಗೆ ಬಿದ್ದಿತ್ತು. ನದಿಯಲ್ಲಿ ವಾಹನ ಬಿದ್ದಿದೆ ಎಂಬ ಸುದ್ದಿ ಮೇರೆಗೆ ಪೊಲೀಸರು ರಕ್ಷಣ ಕಾರ್ಯ ಶುರು ಮಾಡಿದ್ದರು.

ಒಂದು ವಾರದ ಹಿಂದೆ ಮಗ ಸಚ್ಚಿ ಹಾಗೂ ಸಂದೀಪ್ ಮೃತದೇಹ ನೇಲ್ ನದಿಯಲ್ಲಿ ಸಿಕ್ಕಿತ್ತು. ಎರಡು ದಿನಗಳ ಹಿಂದೆ ಸೌಮ್ಯ ಮೃತದೇಹವೂ ಸಿಕ್ಕಿತ್ತು. ಸೋಮವಾರ 12 ವರ್ಷದ ಸಿದ್ಧಾರ್ಥ ಮೃತದೇಹ  ರಕ್ಷಣಾ ಪಡೆ ಹೊರ ತೆಗೆದಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...