alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ದಾಖಲೆಗಾಗಿ BMW ಮಾಡಿದ್ದೇನು…?

ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ್ರೆ ಎಂಥವರಿಗಾದ್ರೂ ಬೇಸರವಾಗೋದು ಸಾಮಾನ್ಯ. ಇಂಥದ್ದೇ ಅನುಭವ BMW ಕಂಪನಿಗೂ ಆಗಿರಬಹುದು. ಅತ್ಯಂತ ಸುದೀರ್ಘ ಅವಧಿಯವರೆಗೆ ಚಲಿಸಿದ ದಾಖಲೆ BMW ಹೆಸರಲ್ಲಿತ್ತು. 2013ರಲ್ಲಿ ಜೋಹಾನ್ ಈ ದಾಖಲೆ ಮಾಡಿದ್ದರು.

ಆದ್ರೆ ಮೂರು ವರ್ಷಗಳಲ್ಲಿ ಟೊಯೊಟಾ ಈ ದಾಖಲೆಯನ್ನು ಎರಡು ಬಾರಿ ಮುರಿದಿದೆ. ಹಾಗಾಗಿ ಜಪಾನ್ ನ ಟೊಯೊಟಾ ಕಂಪನಿಯನ್ನು ಹಿಮ್ಮೆಟಿಸಲು BMW ಹೊಸ ತಂತ್ರಜ್ಞಾನ ಅಳವಡಿಸಿದೆ. ಸತತ 8 ಗಂಟೆಗಳ ಕಾಲ ಚಲಿಸಿದ ದಾಖಲೆ ಮಾಡುವುದು ಕಂಪನಿಯ ಉದ್ದೇಶ.

 

ಅದಕ್ಕಾಗಿ ದೊಡ್ಡ ಇಂಧನ ಟ್ಯಾಂಕ್ ಬೇಕು. ಯಾಕಂದ್ರೆ ಮಧ್ಯೆ ಕಾರು ನಿಲ್ಲಿಸಿ ಇಂಧನ ತುಂಬಿಸಿಕೊಂಡರೆ ದಾಖಲೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಿಫ್ಯುಯೆಲಿಂಗ್ ರಿಗ್ ಒಂದನ್ನು ಕಾರಿಗೆ ಅಳವಡಿಸಲಾಗಿದೆ.

ಇದು ಕೇವಲ 50 ಸೆಕೆಂಡ್ ಗಳಲ್ಲಿ 68 ಲೀಟರ್ ಇಂಧನವನ್ನು ಪಂಪ್ ಮಾಡಬಲ್ಲದು. ಹೊಸ ತಂತ್ರಜ್ಞಾನದ ಸಹಾಯದಿಂದ BMW ಸತತ 8 ಗಂಟೆಗಳ ಕಾಲ ಚಲಿಸಿದ ಹೊಸ ದಾಖಲೆ ಮಾಡಿದೆ. ಒಮ್ಮೆಲೇ 374.1 ಕಿಮೀ ದೂರ ಕ್ರಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...