alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸದಲ್ಲಿ ಸಂಭವಿಸಿದ ಕೌತುಕವನ್ನು ಕಣ್ತುಂಬಿಕೊಂಡ ಜನ

ಕೇತುಗ್ರಸ್ಥ ಚಂದ್ರ ಗ್ರಹಣವನ್ನು ಇಡೀ ವಿಶ್ವ ಕಣ್ತುಂಬಿಕೊಂಡಿದೆ. ಪ್ರಪಂಚದಾದ್ಯಂತ ಭಾರೀ ಕೌತುಕವನ್ನು ಮೂಡಿಸಿದ್ದ ಶತಮಾನದ ಸುದೀರ್ಘ ಚಂದ್ರ ಗ್ರಹಣ ಮುಗಿದಿದೆ. ವಿಶ್ವದ ನಾನಾ ಭಾಗಗಳಲ್ಲಿನ ಜನರು ಈ ಖಗೋಳ ವಿಸ್ಮಯವನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ.

1930ರ ನಂತರದಲ್ಲಿ ಕಂಡು ಬಂದ ಸುದೀರ್ಘ ರಕ್ತ ಚಂದ್ರ ಗ್ರಹಣವನ್ನು ವೀಕ್ಷಿಸಿದ ಪ್ರಪಂಚದ ನಾನಾ ಭಾಗಗಳಲ್ಲಿ ಜನರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅಪರೂಪದ ಅಚ್ಚರಿಯನ್ನು ನೋಡಿ ಖುಷಿ ಪಟ್ಟರು. ಪ್ಯಾರಿಸ್, ನೈರೋಬಿ, ಕೀನ್ಯಾಗಳಲ್ಲಿ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿ ಟೆಲಿಸ್ಕೋಪ್ ಮೂಲಕ ರಕ್ತ ಚಂದಿರನನ್ನ ವೀಕ್ಷಣೆ ಮಾಡಿದರು.

ಹೆಚ್ಚಿನ ಸಂಖ್ಯೆಯ ಜನರು ಬರಿಗಣ್ಣಿನಲ್ಲೇ ಚಂದ್ರಗ್ರಹಣವನ್ನು ವೀಕ್ಷಣೆ ಮಾಡಿದರು. ಹ್ಯಾಪ್ಶೈರ್ನಲ್ಲಿರುವ ಬಾಹ್ಯಾಕಾಶಯಾನಿಗಳ ಒಕ್ಕೂಟ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಏಷ್ಯಾ ಸೇರಿದಂತೆ ವಿಶ್ವದ ನಾನಾ ಪ್ರಾಂತ್ಯಗಳಲ್ಲಿನ ಜನರು ಅಪರೂಪದ ಖಗೋಳ ದೃಶ್ಯ ವೈಭವನ್ನು ನೋಡಿ ಆಶ್ಚರ್ಯಚಕಿತರಾದರು. ಟ್ಯುನೇಷಿಯಾ ರಾಜಧಾನಿಯಾದ ಟುನಿಸ್ನಲ್ಲಿ 2000ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೂಡ ಚಂದ್ರ ಗ್ರಹಣವನ್ನು ವೀಕ್ಷಣೆ ಮಾಡುವಂತಾ ವ್ಯವಸ್ಥೆಯನ್ನ ಜನರಿಗೆ ಕಲ್ಪಿಸಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಚಂದ್ರಗ್ರಹಣದ ನೇರ ದೃಶ್ಯಾವಳಿಗಳನ್ನ ಪ್ರಸಾರ ಮಾಡಿ ಜನರನ್ನ ಅಚ್ಚರಿಯ ಕಡಲಿಗೆ ನೂಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...