alex Certify
ಕನ್ನಡ ದುನಿಯಾ       Mobile App
       

Kannada Duniya

ಆಕೆ ಕಣ್ಣಿನಲ್ಲಿ ನೀರು ಬರುವ ಬದಲು ಸುರಿಯುತ್ತೆ ರಕ್ತ..!

marnie_

ಕಣ್ಣಲ್ಲಿ ನೀರು ಬರುವ ಬದಲು ರಕ್ತ ಬಂದ್ರೆ. ಯಾರಾದ್ರೂ ಭಯಗೊಳ್ತಾರೆ. ವೈದ್ಯರ ಬಳಿ ಓಡ್ತಾರೆ. 17 ವರ್ಷದ ಹುಡುಗಿಯೊಬ್ಬಳು ಇದೇ ಸಮಸ್ಯೆಯಿಂದ ಬಳಲ್ತಿದ್ದಾಳೆ. ವೈದ್ಯರು ಕೂಡ ಕೈಚೆಲ್ಲಿ ಕುಳಿತಿದ್ದಾರೆ.

ಹಾರ್ವೆಯ 17 ವರ್ಷದ ಮಾರ್ನಿ ರೇ ಈ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಗೆ ಯಾವುದೇ ಸ್ನೇಹಿತರಿಲ್ಲ. ಯಾಕೆಂದ್ರೆ ಆಕೆ ಮನೆಯಿಂದ ಹೊರ ಬೀಳುವುದೇ ಇಲ್ಲ. ಮೊದಲು ಕಣ್ಣಲ್ಲಿ ನೋವಾಗುತ್ತಿತ್ತಂತೆ. ನಂತ್ರ ಕಣ್ಣು ರೆಪ್ಪೆಗಳಲ್ಲಿ ರಕ್ತ ಬರಲು ಶುರುವಾಗುತ್ತಿತ್ತಂತೆ. ಆಗ ಕಣ್ಣು ಕಾಣಿಸುತ್ತಿರಲಿಲ್ಲವಂತೆ. 2013ರಲ್ಲಿ ಮೊದಲ ಬಾರಿ ಈ ರೋಗ ಕಾಣಿಸಿಕೊಂಡಿತ್ತಂತೆ.

ಸತತ ಎರಡು ವರ್ಷ ಕಣ್ಣು ರೆಪ್ಪೆಗಳಲ್ಲಿ ರಕ್ತ ಬರ್ತಾ ಇತ್ತಂತೆ. 2015 ರಲ್ಲಿ ಒಂದು ದಿನ ರಾತ್ರಿ ಮಲಗಿದಾಗ ಆಕೆಯ ಮುಖವೆಲ್ಲ ರಕ್ತದಿಂದ ತುಂಬಿ ಹೋಗಿತ್ತಂತೆ. ಕಣ್ಣಿನಿಂದ ಅಪಾರ ಪ್ರಮಾಣದ ರಕ್ತ ಬರ್ತಾ ಇತ್ತಂತೆ. ತಕ್ಷಣ ಆಸ್ಪತ್ರೆಗೆ ಹೋಗಿದ್ದಾಳೆ ಮಾರ್ನಿ. ಆದ್ರೆ ಈಕೆಯನ್ನು ನೋಡಿದ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ.

ಈ ಹಿಂದೆ ಕೋಲ್ಕತ್ತಾದ ಹುಡುಗಿಯೊಬ್ಬಳು ಇದೇ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆ ಕಣ್ಣಿನಲ್ಲಿಯೂ ನೀರಿನ ಬದಲು ರಕ್ತ ಬರ್ತಾ ಇತ್ತು. ಪರೀಕ್ಷೆ ಮಾಡಿದ ವೈದ್ಯರು Psychogenic Purpura ಎಂದು ಹೇಳಿದ್ದರು. ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನೆರವಿನಿಂದ ಕೋಲ್ಕತ್ತಾದ ಪ್ರಿಯಾ ಸದ್ಯ ಚೇತರಿಸಿಕೊಳ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...