alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತ್ಯಂತ ಸೆಕ್ಸೀ ಪುರುಷ ಯಾರು ಗೊತ್ತಾ…?

ಬ್ಲೇಕ್ ಶೆಲ್ಟನ್ ಒಬ್ಬ ಸೂಪರ್ ಸ್ಟಾರ್. ಈ ಹ್ಯಾಂಡ್ಸಮ್ ಗಾಯಕನನ್ನು ನೋಡಲು ಯುವತಿಯರು ಮುಗಿಬೀಳ್ತಾರೆ. ಯಾಕೆ ಗೊತ್ತಾ? ಬ್ಲೇಕ್ ಶೆಲ್ಟನ್ 2017ರ ಅತ್ಯಂತ ಸೆಕ್ಸಿ ಪುರುಷ. ‘ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್’ ಎಂಬ ಹೆಗ್ಗಳಿಕೆಗೆ ಬ್ಲೇಕ್ ಪಾತ್ರರಾಗಿದ್ದಾರೆ.

ಪೀಪಲ್ ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಬ್ಲೇಕ್ ಮಿಂಚಿದ್ದಾರೆ. ಅವರಿಗೆ ಈಗ 41 ವರ್ಷ, ಆದ್ರೆ 20ರ ಹರೆಯದ ಯುವಕನ ಚಾರ್ಮ್ ಇದೆ. ತಮ್ಮ ಸೌಂದರ್ಯದ ಸಂಪೂರ್ಣ ಶ್ರೇಯ ಗೆಳತಿ ಗ್ವೆನ್ ಸ್ಟೆಫಾನಿಗೆ ಸಲ್ಲಬೇಕು ಎನ್ನುತ್ತಾರೆ ಬ್ಲೇಕ್ ಶೆಲ್ಟನ್.

ಬ್ಲೇಕ್ ಶೆಲ್ಟನ್ ಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಅವರ ಆಲ್ಬಂ ‘ಟೆಕ್ಸೋಮಾ ಶೋರ್’ ಕೂಡ ಸೂಪರ್ ಹಿಟ್ ಆಗಿದೆ. ತಾನು ದಪ್ಪಗಿದ್ದೇನೆ, ಆದ್ರೂ ಜನರು ತನ್ನನ್ನು ಇಷ್ಟಪಡ್ತಾರೆ ಎನ್ನುತ್ತಾರೆ ಬ್ಲೇಕ್.

ನಿಯಮಿತ ವ್ಯಾಯಾಮ, ಡಯಟ್ ಮಾಡಿದ್ರೂ ತೂಕ ಇಳಿದಿಲ್ಲ ಅನ್ನೋದು ಅವರ ಅಳಲು. ಡಯಟ್ ಮಾಡೋದು ಬಹಳ ಕಷ್ಟ ಅಂತಾನೂ ಹೇಳಿಕೊಂಡಿದ್ದಾರೆ. ಯಾಕಂದ್ರೆ ಬ್ಲೇಕ್ ಒಬ್ಬ ತಿಂಡಿಪೋತ. ಕರಿದ ತಿಂಡಿಗಳಿಂದ ದೂರವಿರೋದು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...