alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಯ ತಲೆಯನ್ನೇ ಕತ್ತರಿಸಿದೆ ಹುಲ್ಲು ಕತ್ತರಿಸೋ ಯಂತ್ರದಿಂದ ಸಿಡಿದ ಬ್ಲೇಡ್

ಆಟದ ಮೈದಾನ ಮಕ್ಕಳ ಪಾಲಿಗೆ ಅತ್ಯಂತ ಸುರಕ್ಷಿತ ಸ್ಥಳ. ಆದ್ರೆ ಕೆಲವೊಂದು ಅನಿರೀಕ್ಷಿತ ಘಟನೆಗಳಿಂದಾಗಿ ಅಲ್ಲಿ ಕೂಡ ದುರಂತಗಳು ಸಂಭವಿಸುತ್ತವೆ. ಮಲೇಷಿಯಾದಲ್ಲಿ ಇಂಥದ್ದೇ ಅವಘಡವೊಂದು ಬಾಲಕಿಯ ಸಾವಿಗೆ ಕಾರಣವಾಗಿದೆ.

14 ವರ್ಷದ ಬಾಲಕಿ ನುರ್ ಅಫಿನಿ ಅಸ್ಲನ್ ಎಂಬಾಕೆ ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ಲು. ಅಲ್ಲಿ ಹುಲ್ಲನ್ನು ಕತ್ತರಿಸುವ ಕೆಲಸ ನಡೆಯುತ್ತಿತ್ತು. ದಿಢೀರನೆ ಹುಲ್ಲು ಕತ್ತರಿಸುವ ಯಂತ್ರವೊಂದು ಕೈಕೊಟ್ಟಿದೆ.

ಮಷಿನ್ ನಲ್ಲಿದ್ದ ಬ್ಲೇಡ್ ಹೊರಕ್ಕೆ ಚಿಮ್ಮಿ, ಬಾಲಕಿಯ ತಲೆಯನ್ನೇ ಕತ್ತರಿಸಿ ಹಾಕಿದೆ. ಸಮೀಪದಲ್ಲೇ ಆಡುತ್ತಿದ್ದ ಇನ್ನಿಬ್ಬರು ಮಕ್ಕಳು ಕೂಡ ಈ ಅವಘಡದಲ್ಲಿ ಗಾಯಗೊಂಡಿದ್ದಾರೆ.

ಬ್ಲೇಡ್ ಬಂದು ತಾಕಿದ ರಭಸಕ್ಕೆ ವಿದ್ಯಾರ್ಥಿನಿಯ ತಲೆ ಎರಡು ಹೋಳಾಗಿತ್ತು. ಹುಲ್ಲು ಕತ್ತರಿಸುವ ಯಂತ್ರದ ನಿರ್ವಹಣೆ ಜವಾಬ್ಧಾರಿ ಯಾರ ಮೇಲಿತ್ತು? ಈ ದುರ್ಘಟನೆಗೆ ಕಾರಣ ಏನು ಎಂಬುದನ್ನೆಲ್ಲ ಪೊಲೀಸರು ತನಿಖೆ ನಡೆಸ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...