alex Certify
ಕನ್ನಡ ದುನಿಯಾ       Mobile App
       

Kannada Duniya

ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಅತಂತ್ರ

ವಿಶ್ವದಲ್ಲೇ ಅತ್ಯಂತ ಬ್ಯುಸಿಯಾಗಿರುವ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಸಣ್ಣದೊಂದು ಬೆಂಕಿ ಅವಘಡ ಸಂಭವಿಸಿದ್ದರಿಂದ ಸುಮಾರು 1000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ನೆಲಮಾಳಿಗೆಯಲ್ಲಿರೋ ವಿದ್ಯುತ್ ಘಟಕದಲ್ಲಿ ಸಮಸ್ಯೆಯಾಗಿದೆ.

ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು, ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಪ್ರಯಾಣಿಕರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು 10 ಗಂಟೆಗಳೇ ಕಳೆದಿದ್ದು, ಇದುವರೆಗೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ.

ಸದ್ಯಕ್ಕೆ ಪ್ರಯಾಣಿಕರಿಗೆಲ್ಲ ಉಳಿದುಕೊಳ್ಳಲು ಜಾರ್ಜಿಯಾ ಕನ್ವೆನ್ಷನ್ ಸೆಂಟರ್ ನಲ್ಲಿ ವ್ಯವಸ್ಥೆ ಮಾಡುತ್ತಿರುವುದಾಗಿ ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಊಟದ ವ್ಯವಸ್ಥೆ ಕೂಡ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೆಲವು ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದಲ್ಲಿ ಕುಳಿತು ಕಾಲ ಕಳೆದಿದ್ದಾರೆ.

ನಿಲ್ದಾಣದಲ್ಲಾಗಿರುವ ಅವ್ಯವಸ್ಥೆ ಬಗ್ಗೆ ಗೊತ್ತಿಲ್ಲದೇ ಇರೋದ್ರಿಂದ ಪ್ರಯಾಣಿಕರು ಬರುತ್ತಲೇ ಇದ್ದಾರೆ. ವಿಮಾನಕ್ಕಾಗಿ ಕಾಯುತ್ತ ಇಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ. ವೃದ್ಧರು ಹಾಗೂ ವಿಕಲ ಚೇತನರಂತೂ ಸಾಕಷ್ಟು ಬವಣೆ ಅನುಭವಿಸುತ್ತಿದ್ದಾರೆ. ನಿನ್ನೆ ಅಟ್ಲಾಂಟಾ ಏರ್ಪೋರ್ಟ್ ನಿಂದ ಸುಮಾರು 900 ವಿಮಾನಗಳನ್ನು ರದ್ದು ಮಾಡಲಾಗಿತ್ತು, ಇಂದು 300 ವಿಮಾನಗಳ ಹಾರಾಟ ರದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...