alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಟಲಿ ಓಪನ್ ಮಾಡುತ್ತೆ ಏಡಿ..!

crab

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ವಿಚಿತ್ರ ಸಂಶೋಧನೆಯೊಂದನ್ನು ಮಾಡಿದ್ದಾನೆ. ಏಡಿಯ ಕೈಯಲ್ಲಿ ಬಾಟಲಿಯ ಮುಚ್ಚಳ ತೆಗೆಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಖುಷಿಯ ಮೂಡ್ ನಲ್ಲಿದ್ದ ಆ ವ್ಯಕ್ತಿ ಗುಂಡು ಹಾಕಲು ಕುಳಿತಿದ್ದ. ಬಿಯರ್ ಕುಡಿಯೋಣ ಅಂದ್ಕೊಂಡ್ರೆ ಬಾಟಲಿಯ ಮುಚ್ಚಳ ತೆರೆಯಲು ಆತನ ಬಳಿ ಓಪನರ್ ಇರಲಿಲ್ಲ.

ಸಾಮಾನ್ಯವಾಗಿ ಎಲ್ರೂ ಓಪನರ್ ಇಲ್ಲ ಅಂದ್ರೆ ಹಲ್ಲಿನಿಂದ ಕಚ್ಚಿ ಬಾಟಲ್ ತೆರೆಯುತ್ತಾರೆ. ಆದ್ರೆ ಆತನಿಗೆ ಥಟ್ಟಂತ ಬೇರೆಯದ್ದೇ ಐಡಿಯಾ ಹೊಳೆದಿತ್ತು. ಅಲ್ಲೇ ಇದ್ದ ಏಡಿ ನೋಡಿ ಓಪನರ್ ಅವಶ್ಯಕತೆಯೇ ಇಲ್ಲ ಎನಿಸಿತ್ತು. ಆತ ಕೂಡಲೇ ಬಿಯರ್ ಬಾಟಲಿಯನ್ನು ಏಡಿಯ ಕಾಲುಗಳಿಗೆ ಕೊಟ್ಟು ಓಪನ್ ಮಾಡಿಸಿದ್ದಾನೆ.

ಆಸ್ಸಿ ಕಾಮಿಡಿ ಎಂಬ ಫೇಸ್ಬುಕ್ ಗ್ರೂಪ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದ್ದು, ಸಂಚಲನ ಮೂಡಿಸಿದೆ. ಮನುಷ್ಯ ಅಗತ್ಯ ಬಿದ್ದಾಗ ಎಂತಹ ಕೆಲಸಕ್ಕೂ ಕೈಹಾಕ್ತಾನೆ ಅಂತಾ ಜನರು ಅಚ್ಚರಿಪಡ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...