alex Certify
ಕನ್ನಡ ದುನಿಯಾ       Mobile App
       

Kannada Duniya

ಜಿರಳೆ ಸಾಯಿಸಲು ಹೋಗಿ ಮನೆಗೇ ಬೆಂಕಿ ಇಟ್ಟ

ಹೊಸ ಪ್ರಯೋಗಗಳನ್ನು ಮಾಡುವ ಮುನ್ನ ಕೊಂಚ ಜಾಗರೂಕರಾಗಿ ಇರಬೇಕು. ಇಲ್ಲದೇ ಹೋದ್ರೆ ಯಡವಟ್ಟಾಗುವ ಸಾಧ್ಯತೆಯೂ ಇರುತ್ತದೆ. ಯಾಕಂದ್ರೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ ಜಿರಳೆ ಕೊಲ್ಲಲು ಹೋಗಿ ಮನೆಗೇ ಬೆಂಕಿ ಹಚ್ಚಿದ್ದಾನೆ.

ಮನೆಯಲ್ಲಿ ಜಿರಳೆಗಳ ಹಾವಳಿ ವಿಪರೀತವಾಗಿತ್ತು. ಹಾಗಾಗಿ ಫ್ಲೇಮ್ ಥ್ರೋವರ್ ತೆಗೆದುಕೊಂಡು ಆತ ಅಡುಗೆಮನೆಯಲ್ಲಿ ಸ್ಪ್ರೇ ಮಾಡಿದ್ದಾನೆ. ಇದರಿಂದ ಜಿರಳೆ ಸತ್ತಿಲ್ಲ ಬದಲಾಗಿ ಅಡುಗೆ ಮನೆಯಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಆ ರಭಸಕ್ಕೆ ಮನೆಯ ಕಿಟಕಿ, ಬಾಗಿಲುಗಳಿಗೆಲ್ಲ ಹಾನಿಯಾಗಿದೆ.

ಆ ವ್ಯಕ್ತಿಗೂ ಸುಟ್ಟ ಗಾಯಗಳಾಗಿವೆ, ತಲೆಗೂ ಪೆಟ್ಟಾಗಿದೆ. ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಸ್ಪ್ರೇ ಮಾಡುವ ಮುನ್ನ ಅದರ ಮೇಲಿನ ಸಲಹೆಗಳನ್ನು ಗಮನಿಸದೇ ಇದ್ದಿದ್ದು ಈ ಅನಾಹುತಕ್ಕೆ ಕಾರಣ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...