alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಉಳಿಬೇಕಂದ್ರೆ ಸರಿಯಾಗಿ ವಾಹನ ಚಾಲನೆ ಮಾಡಲೇಬೇಕು

ವಾಹನ ಚಲಾಯಿಸೋದು ಅಂದರೆ ಸುಲಭವಲ್ಲ. ಎಲ್ಲರೂ ಸರಿಯಾದ ಡ್ರೈವಿಂಗ್ ವಿಧಾನ ಕಲಿತಿದ್ದರೆ ಅದೆಷ್ಟೋ ಅಪಘಾತಗಳು ತಪ್ಪುತ್ತಿದ್ದವೇನೋ….ಸರಿಯಾದ ಡ್ರೈವಿಂಗ್ ಕಲಿಸಿಕೊಡುವುದಕ್ಕಾಗಿ ಚೀನಾದ ಡ್ರೈವಿಂಗ್ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಕಠಿಣ ಸವಾಲು ನೀಡುತ್ತಿದೆ.

ಚೀನಾದ ಶನ್ಡೋಂಗ್ ಪ್ರೊವಿನ್ಸ್ ನಲ್ಲಿರುವ ಡ್ರೈವಿಂಗ್ ಸ್ಕೂಲ್ ನ ವಿದ್ಯಾರ್ಥಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಅವರದ್ದೇ ಮೊಬೈಲ್ ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂಥ ಸವಾಲನ್ನಿಟ್ಟಿದೆ ಈ ಸ್ಕೂಲ್. ಡ್ರೈವಿಂಗ್ ಟೆಸ್ಟ್ ಗಾಗಿ ಒಂದು ಪ್ರದೇಶದಲ್ಲಿ ಹಳದಿ ಬಣ್ಣದ ಗೆರೆ ಎಳೆದು, ಅದರ ಮೇಲೆ ವಿದ್ಯಾರ್ಥಿಗಳ ಮೊಬೈಲ್ ಗಳನ್ನಿಡಲಾಗುತ್ತದೆ. ಡ್ರೈವಿಂಗ್ ಸೀಟ್ ನಲ್ಲಿ ಕುಳಿತಿರುವ ವ್ಯಕ್ತಿ ಸ್ವಲ್ಪ ಎಚ್ಚರ ತಪ್ಪಿದರೂ ಅವರದ್ದೇ ಮೊಬೈಲ್ ಒಡೆದುಹೋಗುತ್ತದೆ.

ಹೀಗೆ ನೆಲದ ಮೇಲೆ ಫೋನ್ ಇಡುವಂಥ ಐಡಿಯಾ ಕೊಟ್ಟಿದ್ದೂ ಕೂಡ ವಿದ್ಯಾರ್ಥಿಗಳೇ ಎನ್ನುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...