alex Certify
ಕನ್ನಡ ದುನಿಯಾ       Mobile App
       

Kannada Duniya

ಕಗ್ಗಂಟಾಗಿಯೇ ಉಳಿದಿದೆ ‘ಸಿರಿವಂತ’ ದಂಪತಿಗಳ ನಿಗೂಢ ಸಾವು

ಕಳೆದ ವರ್ಷದ ಡಿಸೆಂಬರ್ ನಲ್ಲಿ ತಮ್ಮ ನಿವಾಸದಲ್ಲಿಯೇ ಸಾವಿಗೀಡಾಗಿದ್ದ ಸಿರಿವಂತ ಉದ್ಯಮಿ 75 ವರ್ಷದ ಬ್ಯಾರ್ರಿ ಶರ್ಮೆನ್ ಹಾಗೂ ಅವರ ಪತ್ನಿ 70 ವರ್ಷದ ಹನಿ ಪ್ರಕರಣ ಪೊಲೀಸರ ಪಾಲಿಗೆ ಇನ್ನೂ ಕಗ್ಗಂಟಾಗಿಯೇ ಇದ್ದು, ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕೆನಡಿಯನ್ ಫಾರ್ಮಾಸ್ಯೂಟಿಕಲ್ ನ ದೈತ್ಯ Apotex ಸಂಸ್ಥಾಪಕರಾಗಿದ್ದ ಬ್ಯಾರ್ರಿ ಶರ್ಮೆನ್ ಅತಿ ಸಿರಿವಂತ ಉದ್ಯಮಿಯಾಗಿದ್ದರು. ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿ ಹೆಸರುವಾಸಿಯಾಗಿದ್ದ ದಂಪತಿ ವಿಶ್ವದಾದ್ಯಂತ ಹಲವು ಸಾಮಾಜಿಕ ಸಂಸ್ಥೆಗಳಿಗೆ ನೆರವು ನೀಡಿದ್ದರು. ಇವರ ಒಟ್ಟು ಆಸ್ತಿ 4.77 ಬಿಲಿಯನ್ ಡಾಲರ್ ಗಳೆಂದು ಹೇಳಲಾಗಿದೆ.

ಡಿಸೆಂಬರ್ 15 ರಂದು ದಂಪತಿ ಟೊರಾಂಟೋದಲ್ಲಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂಬ ವರದಿ ಬಂದಿತ್ತು. ಅವರ ನಿವಾಸಕ್ಕೆ ಹೊರಗಿನಿಂದ ಬಲವಂತವಾಗಿ ಯಾರೂ ಪ್ರವೇಶಿಸಿರುವ ಕುರುಹು ಕಂಡು ಬಂದಿರಲಿಲ್ಲ. ಹಲವು ಅಯಾಮಗಳಿಂದ ತನಿಖೆ ನಡೆಸುತ್ತಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಲಭ್ಯವಾಗಿಲ್ಲವೆನ್ನಲಾಗಿದ್ದು, ಬ್ಯಾರ್ರಿ ಕುಟುಂಬಸ್ಥರು ಸಹ ಖಾಸಗಿ ಪತ್ತೆದಾರರನ್ನು ನೇಮಿಸಿಕೊಂಡಿದ್ದು, ಸಾವಿನ ಕಾರಣ ತಿಳಿಯಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...