alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಸವಾರನ ಕಾಪಾಡಿದೆ ಲಾರಿ ಚಾಲಕನ ಸಮಯಪ್ರಜ್ಞೆ

bike-truck-crash_650x400_71494576975

ಚೀನಾದ ಜಿಯಾಂಗ್ಸಿಯಲ್ಲಿ ನಡೆದ ಭೀಕರ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಬೈಕ್ ಒಂದು ಲಾರಿಗೆ ಡಿಕ್ಕಿ ಹೊಡೆದಿತ್ತು. ಆ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆಯ ನಡುವಿನಿಂದ್ಲೇ ಬೈಕ್ ಸವಾರ ಪಾರಾಗಿ ಬಂದಿದ್ದಾನೆ. ಈ ಅಪಘಾತದ ದೃಶ್ಯದ ವಿಡಿಯೋ ಫೇಸ್ಬುಕ್ ನಲ್ಲಿ ಅಪ್ ಲೋಡ್ ಆಗಿದ್ದು, 7 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.

ಲಾರಿ ರೋಡ್ ಕ್ರಾಸ್ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರ ಡಿಕ್ಕಿ ಹೊಡೆದಿದ್ದ. ಹೊತ್ತಿ ಉರಿಯುತ್ತಿದ್ದ ಲಾರಿಯಿಂದ ಜಂಪ್ ಮಾಡಿ ಚಾಲಕ ಹೊರಕ್ಕೆ ಬಂದಿದ್ದಾನೆ. ನಂತರ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಬೈಕ್ ಸವಾರನನ್ನು ಕೂಡ ಕರೆತಂದಿದ್ದಾನೆ. ಅಷ್ಟರಲ್ಲಿ ಸುತ್ತಮುತ್ತ ಇದ್ದ ಜನರೆಲ್ಲ ಸ್ಥಳಕ್ಕೆ ಬಂದು ಇಬ್ಬರನ್ನೂ ಕರೆದೊಯ್ದರು.

ಬೈಕ್ ಸವಾರ ಚೆನ್ ಎಂಬಾತನಿಗೆ ಸುಟ್ಟ ಗಾಯಗಳಾಗಿವೆ. ಆದ್ರೆ ಆತನ ಪ್ರಾಣಕ್ಕೇನೂ ಅಪಾಯವಿಲ್ಲ ಅಂತಾ ವೈದ್ಯರು ತಿಳಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರನ ಜೀವ ಉಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...