alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ನೀರಿನಲ್ಲಿ ಓಡುವ ಬೈಕ್ –ಮೈಲೇಜ್ ಕೇಳಿದ್ರೆ ದಂಗಾಗ್ತೀರಾ

water-bike-

ಸರಿಯಾಗಿ ಪೆಟ್ರೋಲ್ ಸಿಗ್ತಿಲ್ಲ. ಬೆಲೆ ಏರಿಕೆ ಬಿಸಿ ತಪ್ಪಿದ್ದರೂ ಜೇಬು ಖಾಲಿಯಾಗ್ತಾನೆ ಇದೆ. ನೀರು ಕುಡಿದ ಹಾಗೆ ಬೈಕ್ ಪೆಟ್ರೋಲ್ ಕುಡಿತಾ ಇದೆ. ಏನು ಮಾಡೋದಪ್ಪ ಅಂತಾ ತಲೆಕೆಡಿಸಿಕೊಳ್ಳುವ ಬೈಕ್ ಸವಾರರಿಗೆ ಖುಷಿ ಸುದ್ದಿ. ಬೈಕ್ ಸವಾರರ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾನೆ ಬ್ರೆಜಿಲ್ ನ ಒಬ್ಬ ವ್ಯಕ್ತಿ.

ಬ್ರೆಜಿಲ್  ಸಾವೋಪೊಲೊದಲ್ಲಿ ವಾಸಿಸುವ ರಿಕಾರ್ಡೋ ಎಜ್ವಡೈಸ್ ನೀರಿನಲ್ಲಿ ಓಡುವ ಬೈಕ್ ಸಿದ್ಧಪಡಿಸಿದ್ದಾನೆ. ಪೆಟ್ರೋಲ್ ಬೆಲೆಯಿಂದ ಕಂಗೆಟ್ಟಿರುವ ಜನರಿಗಾಗಿಯೇ ಈತ ಈ ಬೈಕ್ ಅನ್ವೇಷಣೆ ಮಾಡಿದ್ದಾನಂತೆ.phpthumb

ನೀರಿನಿಂದ ಓಡುವ ಬೈಕ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಇದರ ಮೈಲೇಜ್ ಕೇಳಿದ್ರೆ ಆಶ್ಚರ್ಯವಾಗುತ್ತೆ. ಒಂದು ಲೀಟರ್ ನೀರು ಹಾಕಿದ್ರೆ ಈ ಬೈಕ್ 500 ಕಿಲೋಮೀಟರ್ ಓಡುತ್ತಂತೆ. ಇದಕ್ಕೆ ಒಂದು ಬ್ಯಾಟರಿಯನ್ನು ಅಳವಡಿಸಲಾಗಿದೆ.

ಪೆಟ್ರೋಲ್ ಇಲ್ಲದ ಈ ಬೈಕ್ ಭಾರತಕ್ಕೆ ಬಂದ್ರೆ ನೀರಿನ ಬೆಲೆ ಮತ್ತಷ್ಟು ಜಾಸ್ತಿಯಾಗುವುದರಲ್ಲಿ ಸಂಶಯವಿಲ್ಲ. ಮೊದಲೇ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ನಡುವೆ ಬೈಕು ನೀರನ್ನು ಕುಡಿಯಲು ಶುರುಮಾಡಿದ್ರೆ ಮನುಷ್ಯನ ಗತಿ ದೇವರಿಗೆ ಪ್ರೀತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...