alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಪ್ಯಾರಾಶೂಟ್‌ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಜಿಗಿತ…!

ಟೆಕ್ಸಾಸ್‌: ಈತನ ನಸೀಬು ಚೆನ್ನಾಗಿದೆ ಎನ್ನಬೇಕೋ, ಅಥವಾ ಛಲಕ್ಕೆ ಸೆಲ್ಯೂಟ್‌ ಹೇಳಬೇಕೋ ತಿಳಿಯದು…

25 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಟೆಕ್ಸಾಸ್‌ನ ವೃತ್ತಿಪರ ಸ್ಕೈ ಡೈವರ್‌ ಪ್ಯಾರಶೂಟ್‌ ಇಲ್ಲದೆ ಜಿಗಿದು, ಸುರಕ್ಷಿತವಾಗಿ ಭೂಮಿಗಿಳಿದಿದ್ದಾನೆ. ಟೆಕ್ಸಾಸ್‌ನ ಲ್ಯೂಕ್‌ ಆಕಿನ್ಸ್‌ ನ ಈ ಸಾಧನೆ ಇದೀಗ ಗಿನ್ನಿಸ್‌ ವಿಶ್ವದಾಖಲೆಯ ಪುಟಗಳನ್ನು ಸೇರಲಿದೆ.

44 ವರ್ಷದ ಆಕಿನ್ಸ್‌, ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಪ್ಯಾರಶೂಟ್‌ ಹಾಕದೇ, 25 ಸಾವಿರ ಅಡಿ ಎತ್ತರದಿಂದ ಜಿಗಿದ ಸ್ಕೈಡೈವರ್‌ ಎನಿಸಿಕೊಂಡಿದ್ದಾರೆ. ಈ ಸಾಹಸವನ್ನು ಸಂಪೂರ್ಣ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಭೂಮಿಗೆ ಇಳಿಯುವ ವೇಳೆ ಅಳವಡಿಸಲಾಗಿದ್ದ ನೆಟ್‌ಗೆ ಆಕಿನ್ಸ್‌ ಸುರಕ್ಷಿತವಾಗಿ ಇಳಿದಿದ್ದಾರೆ. ಈ ಹಿಂದೆ ಐರನ್‌ ಮ್ಯಾನ್‌ ಸೇರಿದಂತೆ ಇನ್ನಿತರ ಕೆಲ ಹಾಲಿವುಡ್‌ ಸಿನಿಮಾಗಳಿಗೆ ಸ್ಟಂಟ್‌ ಮ್ಯಾನ್‌ ಆಗಿಯೂ ಆಕಿನ್ಸ್‌ ಕೆಲಸ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...