alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಪ್ ನಿಂದಾಗಿ ಇಳಿಯಿತು ಯುವತಿಯ ತೂಕ

2015 ರ ಜನವರಿಯಲ್ಲಿ ಹೊಸ ವರ್ಷದಂದು ಸಿಯಾನ್ ರಯಾನ್ ಒಂದು ನಿರ್ಧಾರಕ್ಕೆ ಬಂದಿದ್ಲು. ಅದೇನೇ ಆದ್ರೂ ತೂಕ ಇಳಿಸಿಕೊಳ್ಳಲೇಬೇಕು ಅಂತಾ ಹಠ ತೊಟ್ಟಿದ್ಲು. ಹಾಗೂ ಹೀಗೂ ಕಷ್ಟಪಟ್ಟು 20 ಪೌಂಡ್ ತೂಕ ಕಡಿಮೆ ಮಾಡಿಕೊಂಡ್ಲು. ಆದ್ರೆ ಕೆಲವು ದಿನಗಳಲ್ಲಿ ಮತ್ತೆ ಅದಕ್ಕಿಂತ್ಲೂ ಹೆಚ್ಚು ತೂಕವಾಗಿದ್ಲು.

ಆ ಸಮಯದಲ್ಲಿ ಸಿಯಾನ್ ಗೆ ಬಾಯ್ ಫ್ರೆಂಡ್ ಇದ್ದ. ಅವನ ಜೊತೆಗೆ ಡೇಟಿಂಗ್, ಲಂಚ್, ಡಿನ್ನರ್ ಅಂತಾ ಚೆನ್ನಾಗಿ ತಿಂದು ತಿಂದು ಊದಿಕೊಳ್ಳುತ್ತಿದ್ಲು. ಪಬ್ ಗೆ ಹೋಗೋದು, ಕುಡಿಯೋದು ಸಾಮಾನ್ಯವಾಗಿಬಿಟ್ಟಿತ್ತು. 2015 ರ ಸೆಪ್ಟೆಂಬರ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಸಿಯಾನ್ ರೊಮ್ಯಾಂಟಿಕ್ ಹಾಲಿಡೇಗೆ ತೆರಳಿದ್ಲು.

ಆಗ ಪ್ರಿಯಕರ ಅವಳಿಗೆ ಕೈಕೊಟ್ಟು ಬಿಟ್ಟಿದ್ದ. ಈ ಬ್ರೇಕಪ್ ನಿಂದ ತೀವ್ರ ನೊಂದಿದ್ದ ಸಿಯಾನ್ ಬೇಸರ ಕಳೆಯಲು ಜಿಮ್ ಮಾಡಲು ಆರಂಭಿಸಿದ್ಲು. ನೆಗೆಟಿವ್ ಭಾವನೆಗಳನ್ನು ಬದಲಾಯಿಸಲು ಈ ವರ್ಕೌಟ್ ಅವಳಿಗೆ ಸಾಕಷ್ಟು ನೆರವಾಗಿದೆ. ಹೀಗೆ ಶುರುವಾದ ಅವಳ ವೇಯ್ಟ್ ಲಾಸ್ ಜರ್ನಿ ಅಚ್ಚರಿಯ ಫಲಿತಾಂಶ ಕೊಟ್ಟಿದೆ.

261 ಪೌಂಡ್ ತೂಕವಿದ್ದ ಸಿಯಾನ್, ಕೆಲವೇ ತಿಂಗಳುಗಳಲ್ಲಿ 87 ಪೌಂಡ್ ತೂಕ ಕಡಿಮೆ ಮಾಡಿಕೊಂಡ್ಲು. ವರ್ಕೌಟ್ ಜೊತೆಗೆ ಸ್ಟ್ರಿಕ್ಟ್ ಡಯಟ್ ಮೂಲಕ ಆರೋಗ್ಯವನ್ನೂ ಕಾಪಾಡಿಕೊಂಡಿದ್ದಾಳೆ. ಪ್ರಿಯಕರ ಕೈಕೊಟ್ಟ ಬಳಿಕ ಸಿಯಾನ್ ಬದುಕಲ್ಲಿ ಹೊಸ ಭರವಸೆ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...