alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸಿಯುತ್ತಿದೆ ಬೀಜಿಂಗ್ ನಗರ

1937273a4415daf363865a2725a81128ಅತಿಯಾದ ಅಂತರ್ಜಲ ಬಳಕೆ, ತ್ವರಿತಗತಿಯ ನಗರೀಕರಣ, ಬೃಹತ್ ಕಟ್ಟಡ ಮುಂತಾದವುಗಳು ಜನಜೀವನಕ್ಕೆ ಎಷ್ಟು ಘಾಸಿ ಮಾಡುತ್ತವೆ ಎಂಬುದಕ್ಕೆ ಬೀಜಿಂಗ್ ಉತ್ತಮ ಉದಾಹರಣೆ.

ಚೀನಾದ ರಾಜಧಾನಿ ಬೀಜಿಂಗ್ ಅತಿಯಾಗಿ ನೀರಿನ ಕೊರತೆ ಎದುರಿಸುತ್ತಿರುವ ನಗರ. ಇಲ್ಲಿ ಪ್ರತಿ ವರ್ಷ 350 ಕೋಟಿ ಲೀಟರ್ ನೀರಿನ ಬಳಕೆ ಮಾಡುತ್ತಾರೆ. ಬೀಜಿಂಗ್ ನ ವಾಣಿಜ್ಯ ಜಿಲ್ಲೆಯಾಗಿರುವ ಚಾವೊಯಾಂಗ್ ನಲ್ಲಿ ಅನೇಕ ಗಗನಚುಂಬಿ ಕಟ್ಟಡಗಳಿವೆ. ಇಲ್ಲಿ ಬಹುತೇಕ ಜನ ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಈ ಕಾರಣದಿಂದಾಗಿಯೇ ಇಲ್ಲಿ ನೆಲ ಕುಸಿಯುತ್ತಿದೆ.

ರಿಮೋಟ್ ಸೆನ್ಸಿಂಗ್ ಎಂಬ ನಿಯತಕಾಲಿಕೆಯ ವರದಿಯ ಪ್ರಕಾರ, ಈ ಮಹಾನಗರ ಕಳೆದ ಒಂದು ದಶಕದಲ್ಲಿ ಸುಮಾರು 14 ಇಂಚಿನಷ್ಟು ಕುಸಿದಿದೆಯಂತೆ. ಎಷ್ಟು ಆಘಾತಕಾರಿ ಅಲ್ಲವೇ…? ಹೌದು, ಇದು ನಿಜ. ರೈಲ್ವೆ ಸಂಕೀರ್ಣ, ಗಗನಚುಂಬಿ ಕಟ್ಟಡಗಳು, ಬರಿದಾಗುತ್ತಿರುವ ಅಂತರ್ಜಲ ಇವೆಲ್ಲದರ ಪರಿಣಾಮವಾಗಿ ಬೀಜಿಂಗ್ ವರ್ಷಕ್ಕೆ ಸರಾಸರಿ 4 ಇಂಚಿನಷ್ಟು ಕುಸಿಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...