alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ 50 ಸಾವಿರ ಸಂಪಾದಿಸುವ ಭಿಕ್ಷುಕ ವಾಸಿಸೋದು ಐಷಾರಾಮಿ ಮನೆಯಲ್ಲಿ..!

londonbegger

ಭಿಕ್ಷುಕರ ಸಂಪಾದನೆ ಹೆಚ್ಚಾಗ್ತಾ ಇದೆ. ದಿನವೊಂದಕ್ಕೆ ಭಾರತದಲ್ಲಿ ನೂರು ಇನ್ನೂರು ಸಂಪಾದನೆ ಮಾಡ್ತಾರೆ. ಆದ್ರೆ ಲಂಡನ್ ನಲ್ಲಿ ಭಿಕ್ಷುಕನೊಬ್ಬ ದಿನಕ್ಕೆ 50 ಸಾವಿರ ಸಂಪಾದಿಸ್ತಾನೆ. ನಿಜ ಹೇಳಬೇಕೆಂದ್ರೆ ಆತ ಭಿಕ್ಷುಕನಲ್ಲ. ಭಿಕ್ಷುಕನ ವೇಷ ಧರಿಸಿರುವ  ಶ್ರೀಮಂತ.

ಹೌದು, ಲಂಡನ್ ನ ಪಶ್ಚಿಮ ಮಿಡ್ಲ್ಯಾಂಡ್ಸ್ನ Wolverhampton ಸಿಟಿ ಸೆಂಟರ್ ನಲ್ಲಿ ಈತ ಭಿಕ್ಷೆ ಬೇಡ್ತಾನೆ. ಈತನ ಪ್ರತಿವರ್ಷದ ಸಂಪಾದನೆ 1 ಕೋಟಿ 30 ಲಕ್ಷ. ಇದು ಪ್ರಧಾನಮಂತ್ರಿ ಡೆವಿಡ್ ಕ್ಯಾಮೆರಾನ್ ಸಂಪಾದನೆಗಿಂತ  12 ಲಕ್ಷ ರೂಪಾಯಿ ಮಾತ್ರ ಕಡಿಮೆ ಇದೆ. Wolverhampton ಕೌನ್ಸಿಲರ್ ಪ್ರಕಾರ ಆತ ಐಷಾರಾಮಿ ಮಹಲ್ ನಲ್ಲಿ ವಾಸಿಸ್ತಾ ಇದ್ದು, ಬೀದಿಯಲ್ಲಿ ಕುಳಿತು ಜನರನ್ನು ವಂಚಿಸ್ತಿದ್ದಾನಂತೆ.

ಭಿಕ್ಷುಕನಾಗಿರುವ ಅವನು ಬೀದಿ ಬೀದಿ ಸುತ್ತಿ ಜನರಿಂದ ಹಣ ಸಂಪಾದಿಸ್ತಾನಂತೆ. ಆತನ ಬಳಿ ಇರುವ ಆಸ್ತಿ ಉತ್ತಮವಾಗಿದ್ದು, ಕುಡಿಯುವುದಕ್ಕಾಗಿ ಆತ ಹೀಗೆ ಮಾಡ್ತಾನೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ. ಆಸ್ತಿ, ಮನೆಯಿದ್ದು ಕೆಲವರು ಹೀಗೆ ಭಿಕ್ಷೆ ಬೇಡ್ತಾರೆ. ಇದ್ರಿಂದಾಗಿ ಅಗತ್ಯ ಇರುವವರಿಗೆ ತೊಂದರೆಯಾಗ್ತಿದೆ ಎನ್ನುತ್ತಾರೆ ಕೌನ್ಸಿಲರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...