alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿಗಿಂತ ಬಿಯರ್ ಕುಡಿಯೋದೇ ಒಳ್ಳೆಯದಂತೆ..!

FOUR HANDS MALE AND FEMALE TOAST WITH MUGS OF BEER

ನೀವು ಗುಂಡು ಪ್ರಿಯರಾ? ಅದ್ರಲ್ಲೂ ಬಿಯರ್ ನಿಮ್ಮ ಇಷ್ಟದ ಡ್ರಿಂಕ್ ಆಗಿದ್ರೆ ನಿಮಗೊಂದು ಗುಡ್ ನ್ಯೂಸ್ ಇದೆ. ಬಿಯರ್, ಹಾಲಿಗಿಂತ್ಲೂ ಉತ್ತಮ ಮತ್ತು ಆರೋಗ್ಯಕರ ಪಾನೀಯ ಅಂತಾ PETA ಹೇಳ್ತಿದೆ. ಪ್ರಾಣಿ ಹಿಂಸೆ ವಿರುದ್ಧ ಚಳವಳಿ ನಡೆಸ್ತಾ ಇರೋ The People for Ethical Treatment of Animals ಸಂಘಟನೆ ಅಮೆರಿಕಾದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಜಾಹೀರಾತೊಂದನ್ನು ಹಾಕಿದೆ.

ಹಾಲಿನ ಬದಲು ಬಿಯರ್ ಕುಡಿಯಿರಿ ಅಂತಾ ವಿದ್ಯಾರ್ಥಿಗಳಿಗೆ ಕರೆಕೊಟ್ಟಿದೆ. ಹಾಲು ಕುಡಿಯೋದ್ರಿಂದ ಮೂಳೆ ಸವೆಯುತ್ತದೆ, ಆದ್ರೆ ಬಿಯರ್ ನಿಮ್ಮ ಮೂಳೆಯನ್ನು ಗಟ್ಟಿ ಮಾಡುತ್ತದೆ ಅಂತಾ ಪೆಟಾ ಹೇಳ್ತಿದೆ. ಹಾಲು ಸೇವನೆ ಮನುಷ್ಯನ ಆರೋಗ್ಯಕ್ಕೆ ಹಾನಿಕರ, ಶತಕೋಟಿ ಗೋವುಗಳಿಗೂ ಅದರಿಂದ ಹಿಂಸೆಯಾಗ್ತಿದೆ. ಡೈರಿ ಉತ್ಪನ್ನಗಳ ಸೇವನೆಯಿಂದ ಹೃದಯದ ತೊಂದರೆ, ಒಬೆಸಿಟಿ, ಸಕ್ಕರೆ ಖಾಯಿಲೆ ಮತ್ತು ಕ್ಯಾನ್ಸರ್ ಬರುತ್ತದೆ. ಮೊಡವೆ , ಗ್ಯಾಸ್ಟ್ರಿಕ್ ಇವೆಲ್ಲದಕ್ಕೂ ಡೈರಿ ಉತ್ಪನ್ನಗಳೇ ಕಾರಣ ಅಂತಾ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದೆ. 2000 ನೇ ಇಸ್ವಿಯಲ್ಲೂ ಈ ಜಾಹೀರಾತು ಕಾಣಿಸಿಕೊಂಡಿತ್ತು. ಇದೊಂದು ಬೇಜವಾಬ್ಧಾರಿಯುತ ಕ್ಯಾಂಪೇನ್ ಅಂತಾ ಎಲ್ಲರೂ ಟೀಕಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...