alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಯರ್ ಪ್ರಿಯರಿಗೊಂದು ಖುಷಿ ಸುದ್ದಿ

ಸಾಮಾನ್ಯವಾಗಿ ಕುಡಿತದ ಚಟ ಹತ್ತಿಸಿಕೊಳ್ಳೋರು ಮೊದಲು ಕುಡಿಯೊದೇ ಬಿಯರ್. ಸೆಲೆಬ್ರೇಷನ್ಸ್ ನ ಕಿಕ್ ಹೆಚ್ಚಿಸೋಕೆ ಪಡ್ಡೆಗಳಿಂದ ಹಿಡಿದು ದೊಡ್ಡವರು ಕೂಡ ಬಿಯರ್ ಬಾಟಲಿ ಕೈಗೆತ್ತಿಕೊಳ್ತಾರೆ. ಅತ್ತ ಸಂಪೂರ್ಣ ಆಲ್ಕೋಹಾಲ್ ಕೂಡ ಅಲ್ಲದ ಇತ್ತ ಹಾರ್ಡ್ ಡ್ರಿಂಕ್ ಸಾಲಿಗೂ ಸೇರದ ಬಿಯರ್ ಆರೋಗ್ಯಕ್ಕೆ ತುಂಬಾ ಸಹಕಾರಿ ಅನ್ನೋ ವಿಚಾರವೀಗ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಹೊಸ ಅಧ್ಯಯನಿಕ ವರದಿಯ ಪ್ರಕಾರ ಬಿಯರ್ ನಲ್ಲಿ ವೈನ್ ಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ ಬಿ ಇದೆಯಂತೆ. ಬಿಯರ್ ಅಂದ ಕೂಡಲೇ ಎಲ್ಲರು ಅಂದುಕೊಳ್ಳೋದು ಆಲ್ಕೋಹಾಲ್ ಅಂತ. ಆದ್ರೆ ಬಿಯರ್ ಒಂದು ಆರೋಗ್ಯವರ್ಧಕ ಪಾನೀಯ ಅಂತಿದ್ದಾರೆ ವಿಜ್ಞಾನಿಗಳು. ಹೃದಯಾಘಾತದ ಆತಂಕವನ್ನು ಬಿಯರ್ ಕಡಿಮೆ ಮಾಡುತ್ತೆ. ಅಷ್ಟೇ ಅಲ್ಲ ಮೆದುಳಿನ ಆರೋಗ್ಯವನ್ನು ಬಿಯರ್ ನಿಯಂತ್ರಣದಲ್ಲಿಡುತ್ತದೆಯಂತೆ.

ಕ್ಯಾಲ್ಸಿಯಂ, ಮೆಗ್ಸಿಷಿಯಂ, ಕಬ್ಬಿಣ, ತಾಮ್ರ, ಪೊಟಾಸಿಯಂನ ಪ್ರಮಾಣ ಬಿಯರ್ ನಲ್ಲಿ ಹದವಾಗಿದೆಯಂತೆ. ಆ ಕಾರಣಕ್ಕೆ ಬಿಯರ್ ಒಂದು ಆರೋಗ್ಯಕರ ಪೇಯವಾಗಿದೆ ಅಂತ ಹೊಸ ಅಧ್ಯಯನದ ವರದಿ ಹೇಳ್ತಿದೆ. ಡಯಾಬಿಟಿಸ್ ಮತ್ತು ರಕ್ತ ಸಂಚಾರದ ಮೇಲೂ ಬಿಯರ್ ಧನಾತ್ಮಕ ಪರಿಣಾಮ ಬೀರುತ್ತದೆ ಅಂತ ಅಧ್ಯಯನದ ವರದಿ ಹೇಳ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...