alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಶರಣಾದ ಬ್ಯಾಂಕಾಂಕ್ ಸುಂದರಿ

30 ವರ್ಷದ ಸೌಂದರ್ಯ ರಾಣಿ ಕನ್ಯಾಕಾರ್ನ್ ಸುಪರ್ನಕಚೋರಿಯಾನ್ ಬ್ಯಾಂಕಾಂಕಿನ ಮೂರನೇ ಅಂತಸ್ತಿನ ಮನೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದ ಈ ಚೆಲುವೆ, ವೈಯಕ್ತಿಕ ಜೀವನದಲ್ಲಿ ಎದುರಾದ ಸಾಲು ಸಾಲು ಸಮಸ್ಯೆಗಳಿಂದ ಬೇಸತ್ತು ಬ್ಯಾಂಕಾಂಕ್ ನ ವಾಂಗ್ ಥಾಂಗ್ ಲಾಗ್ ಪ್ರದೇಶದಲ್ಲಿರುವ ಮೂರನೇ ಅಂತಸ್ತಿನ ಮನೆಯಿಂದ ಹಾರಿದ್ದಾರೆ‌. ಕೂಡಲೇ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ, ತೀವ್ರ ರಕ್ತಸ್ರಾವದಿಂದ ಬಳಲಿದ್ದರಿಂದ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ‌.

ಬಳಿಕ ಮನೆಯನ್ನು ಪರಿಶೀಲಿಸಿದಾಗ, ಕನ್ಯಾಕಾರ್ನ್ ಅವರ ನಿವಾಸದಲ್ಲಿ ಸಸ್ಯನಾಶಕ ಪತ್ತೆಯಾಗಿದ್ದು, ಇದನ್ನು ಸೇವಿಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಕೇನ್ ಲಿಡೆರರ್ ಎಂದೇ ಹೆಸರಾಗಿದ್ದ ಕನ್ಯಾಕಾರ್ನ್, ನೆಕ್ಸ್ಟ್ ಟಾಪ್ 2012ರ ರನ್ನರ್ ಅಪ್, 2013ರ ಮಿಸ್ ಸೂಪರ್ ಕಾರ್, 2012ರ ಮಿಸ್ ಥೈಲ್ಯಾಂಡ್ ಪ್ರಶಸ್ತಿ ವಿಜೇತೆಯಾಗಿದ್ದರು. ಇದರೊಂದಿಗೆ ಕೆಲ‌ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...