alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರ ನೋಡಿ ಏನು ಅಂತಾ ನೀವೇ ತೀರ್ಮಾನ ಮಾಡಿ…!

ಸದ್ಯ ಸಾಮಾಜಿಕ ತಾಣದಲ್ಲಿ ಒಂದು ಫೋಟೋ ಸಖತ್ ವೈರಲ್ ಆಗ್ತಾ ಇದೆ. ಈ ಫೋಟೋವನ್ನು ಒಮ್ಮೆ ನೋಡಿದ್ರೆ, ಮತ್ತೊಮ್ಮೆ ನೋಡಬೇಕು ಎಂದು ಅನಿಸದೇ ಇರದು. ಇದಕ್ಕೆ ಕಾರಣ ಈ ಪೋಟೋ ಹಾಕಿ ಕೇಳಿದ ಪ್ರಶ್ನೆ ನೆಟ್ಟಿಗರ ತಲೆ ತಿನ್ನುತ್ತಿದೆ. ಅಂದಹಾಗೆ ಈ ಫೋಟೋ ಕಳೆದ ಒಂದು ವಾರದಲ್ಲಿ ಹೆಚ್ಚು ಜನರ ತಲೆ ಕೆಡಿಸಿದೆ.

ಬೆಕಿ ಎನ್ನುವರು ಆಗಸ್ಟ್ 25 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೋ ಹಾಕಿದ್ದಾರೆ. ಅಲ್ಲದೆ ಅದರ ಕೆಳಗೆ ಇದು ಬಾಗಿಲಾ ಇಲ್ಲ ಬೀಚ್ ಎರಡರಲ್ಲಿ ಯಾವುದು ಎಂದು ಹೇಳಿ ಎಂಬ ಪ್ರಶ್ನೆ ಕೇಳಿದ್ದಾರೆ. ಈ ಪೋಟೋವನ್ನು ಗಮನವಿಟ್ಟು ನೋಡಿದ್ರೆ, ಒಮ್ಮೆ ಬೀಚ್ ತರ ಕಾಣಿಸಿದ್ರೆ ಮತ್ತೊಮ್ಮೆ ಬಾಗಿಲು ಎನಿಸುತ್ತದೆ. ಈ ಚಿತ್ರ ನೋಡಿದ್ಮೇಲೆ ಗೊಂದಲ ಉಂಟಾಗುವುದು ಸಹಜ.

ಈ ಫೋಟೋಗೆ ನೆಟ್ಟಿಗರು ಮನಸೋತಿದ್ದಾರೆ. 32600 ಲೈಕ್ ಗಳು ಬಂದಿದ್ದು, 18600 ಜನ ರೀ-ಟ್ವಿಟ್ ಮಾಡಿದ್ದಾರೆ. ಇನ್ನು ಕೆಲವರು ಕಮೆಂಟ್ ಮಾಡಿ ಮಜಾ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...