alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಗಳಿಗೆ ‘ಮುತ್ತು’ ಕೊಡುವ ಮುನ್ನ ಒಮ್ಮೆ ಓದಿ !!

Kissing-scene-in-Spectre

ಈಗಾಗಲೇ ಜಗತ್ತಿನ ಹಲವು ದೇಶಗಳನ್ನು ಬೆಚ್ಚಿ ಬೀಳಿಸಿರುವ ಜಿಕಾ ವೈರಸ್ ( ಸೋಂಕು ) ‘ಮುತ್ತು’ ಕೊಟ್ಟರೂ ಹರಡುತ್ತದೆ ಎಂಬ ಅಂಶವನ್ನು ಸಂಶೋಧನೆಯೊಂದು ಬಹಿರಂಗಪಡಿಸಿದ್ದು ‘ಮುತ್ತಿನ ಮತ್ತಿ’ ನಲ್ಲಿ ತೇಲುವ ಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ.

ಹೌದು. ಈ ಹಿಂದೆ ಜಿಕಾ ವೈರಸ್ ಲೈಂಗಿಕ ಕ್ರಿಯೆ ಮೂಲಕ ಹರಡುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಮತ್ತೊಂದು ವೈದ್ಯಕೀಯ ವರದಿಯ ಪ್ರಕಾರ, ಮನುಷ್ಯರ ಜೊಲ್ಲುರಸ, ಮೂತ್ರದಲ್ಲೂ ಜಿಕಾ ವೈರಾಣುಗಳಿರುವುದು ಪತ್ತೆಯಾಗಿದ್ದು ಈ ಸೋಂಕಿಗೆ ಒಳಗಾಗಿರುವವರು ಮುತ್ತು ಕೊಡುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ವಿಶೇಷವೆಂದರೆ ಜಿಕಾ ವೈರಸ್ ಸೊಳ್ಳೆಗಳಿಂದ ಮಾತ್ರ ಹರಡುತ್ತವೆ ಎಂದು ಮೊದಲು ನಂಬಲಾಗಿತ್ತು. ನಂತರ, ಲೈಂಗಿಕ ಸಂಪರ್ಕದಿಂದಲೂ ಹರಡುವುದು ಸಂಶೋಧನೆಗಳಿಂದ ದೃಢಪಟ್ಟಿತ್ತು. ಆದರೆ ಇದೀಗ ಮುತ್ತಿನಿಂದ ಸಹ ಈ ಸೋಂಕು ಹರಡಬಹುದು ಎನ್ನಲಾಗಿದ್ದು, ಹಾಗಾಗಿ ಮತ್ತಷ್ಟು ಎಚ್ಚರಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...