alex Certify
ಕನ್ನಡ ದುನಿಯಾ       Mobile App
       

Kannada Duniya

ಯಡವಟ್ಟು ಮಾಡಿದ ಬಳಿಕ ಕ್ಷಮೆ ಯಾಚಿಸಿದ ಬಿಬಿಸಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್, ಪಾಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಧಾನಿ ರೇಸ್ ನಲ್ಲಿದ್ದಾರೆ. ಈ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದ್ರೆ, ಬಿ.ಬಿ.ಸಿ. ಇಮ್ರಾನ್ ಖಾನ್ ಬದಲು, ವಾಸೀಮ್ ಅಕ್ರಮ್ ರ ದೃಶ್ಯ ಪ್ರಸಾರ ಮಾಡಿತ್ತು. ತಾನು ಮಾಡಿದ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಬಿ.ಬಿ.ಸಿ. ಕ್ಷಮೆಯಾಚಿಸಿದೆ.

ಬಿ.ಬಿ.ಸಿ. ನ್ಯೂಸ್ ನೈಟ್ ಕಾರ್ಯಕ್ರಮದಲ್ಲಿ ಪಾಕ್ ಚುನಾವಣೆಯ ವರದಿಯನ್ನು ಬಿತ್ತರಿಸಿತ್ತು. ಈ ವೇಳೆ ಪಾಕ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ರ ಚಿತ್ರದ ಬದಲು, ಮಾಜಿ ಪಾಕ್ ಆಟಗಾರ ಎಡಗೈ ವೇಗಿ ವಾಸಿಮ್ ಅಕ್ರಮ್ ರನ್ನು ತೋರಿಸಿತ್ತು. ಈ ತಪ್ಪು ಮನವರಿಕೆ ಆಗುತ್ತಿದ್ದಂತೆ ಬಿ.ಬಿ.ಸಿ. ನಿರೂಪಕ ಇವಾನ್ ಡೇವಿಸ್ ಈ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ನಮ್ಮ ವಾಹಿನಿಯಲ್ಲಿ ಇಮ್ರಾನ್ ಖಾನ್ ರನ್ನು ತೋರಿಸುವ ಬದಲು ವಾಸೀಮ್ ಅಕ್ರಮ್ ರನ್ನು ತೋರಿಸಿದ್ದೇವೆ ಎಂದು ತಿಳಿಸಿದ್ರು.

ವಾಸೀಮ್ ಅಕ್ರಮ್ ಹಾಗೂ ಇಮ್ರಾನ್ ಖಾನ್ ಪಾಕ್ ಕಂಡ ಶ್ರೇಷ್ಠ ಪ್ಲೇಯರ್ಸ್….ಇಮ್ರಾನ್ ಖಾನ ಮುಂದಾಳತ್ವದಲ್ಲೇ 1992ರಲ್ಲಿ ಪಾಕಿಸ್ತಾನ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ವಾಸೀಮ್ ಕ್ರಿಕೆಟ್ ಸಂಬಂಧಿತ ಕಾರ್ಯದಲ್ಲೇ ಮುಂದುವರೆದ್ರೆ, ಇಮ್ರಾನ್ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...