alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲೇಡ್ ನಿಂದ ಕಣ್ಣುಗುಡ್ಡೆ ಕ್ಲೀನ್ ಮಾಡ್ತಾನೆ ಈ ಕ್ಷೌರಿಕ

ಚೀನಾದ ಕ್ಷೌರಿಕನೊಬ್ಬ ರೇಜರ್ ಹಾಗೂ ಹರಿತವಾದ ಬ್ಲೇಡ್ ನಿಂದ ಗ್ರಾಹಕರ  ಕಣ್ಣುಗುಡ್ಡೆಗಳನ್ನು ಸ್ವಚ್ಛ ಮಾಡ್ತಿದ್ದಾನೆ. ಕಳೆದ 40 ವರ್ಷಗಳಿಂದ ಇದೇ ರೀತಿ ಮಾಡುತ್ತಿದ್ದು, ಕಣ್ಣುಗಳಿಗೆ ಯಾವುದೇ ತೊಂದರೆಯಾಗಿಲ್ಲ ಅಂತಾ ಹೇಳಿದ್ದಾನೆ.

62 ವರ್ಷದ ಕ್ಸಿಯಾಂಗ್ ಗೌವು ಮಾಡ್ತಿರೋ ಈ ಹುಚ್ಚು ಸಾಹಸವನ್ನು ಯಾವ ಕ್ಷೌರಿಕರೂ ಟ್ರೈ ಮಾಡದೇ ಇರೋದೇ ಒಳಿತು. ಇವನನ್ನು ಕಣ್ಣುಗುಡ್ಡೆ ಶೇವಿಂಗ್ ತಜ್ಞ ಎಂದೇ ಕರೆಯಲಾಗುತ್ತದೆ. ಈತ ಚಾಕುವಿನಿಂದ ಗ್ರಾಹಕರ ಕಣ್ಣುಗಳನ್ನು ಕ್ಲೀನ್ ಮಾಡ್ತಾನೆ.

ಕೇವಲ ಐದು ನಿಮಿಷಗಳನ್ನು ಕಣ್ಣುಗಳನ್ನು ಪೂರ್ತಿಯಾಗಿ ಈತ ಶುಚಿಗೊಳಿಸ್ತಾನಂತೆ. ಅಯೋಡಿನ್ ಅನ್ನೋ ಸೊಲ್ಯೂಶನ್ ಅನ್ನು ಇದಕ್ಕಾಗಿ ಬಳಸ್ತಾನೆ, ಬ್ಲೇಡ್ ಗೆ ಐ ಡ್ರಾಪ್ಸ್ ಸವರಿಕೊಂಡು ನಂತರ ಕಣ್ಣುಗುಡ್ಡೆ ಶೇವ್ ಮಾಡ್ತಾನೆ.

ಹೀಗೆ ಮಾಡುವುದರಿಂದ ರೆಪ್ಪೆಯ ಒಳಭಾಗ ಸ್ವಚ್ಛವಾಗಿ ಕಣ್ಣು ಚೆನ್ನಾಗಿ ಕಾಣಿಸುತ್ತದೆ ಅನ್ನೋದು ಕ್ಸಿಯಾಂಗ್ ಹೇಳಿಕೆ. ಆದ್ರೆ 30 ವರ್ಷಕ್ಕೂ ಮೇಲ್ಪಟ್ಟವರಿಗೆ ಮಾತ್ರ ಈ ರೀತಿ ಸೇವೆ ನೀಡ್ತಾನಂತೆ. ಚೆಂಗ್ಡುವಿನಲ್ಲಿ ಇವನ ಕಟಿಂಗ್ ಶಾಪ್ ಇದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...