alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ನಂತ್ರ ಬರಾಕ್ ಒಬಾಮಾರಿಗೆ ಏನೆಲ್ಲ ಸಿಗುತ್ತೆ ಗೊತ್ತಾ?

ia-13

ಈಗಾಗಲೇ ಅಮೆರಿಕಾ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬರಾಕ್ ಒಬಾಮಾ ತಮ್ಮ ಸ್ಥಾನದಿಂದ ಕೆಳಗಿಳಿದು ಎಲ್ಲ ಅಧಿಕಾರವನ್ನು ಡೊನಾಲ್ಡ್ ಗೆ ಹಸ್ತಾಂತರಿಸಲಿದ್ದಾರೆ. ನಿವೃತ್ತಿ ನಂತ್ರವೂ ಒಬಾಮಾರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಲಭಿಸಲಿವೆ.

1958ಕ್ಕಿಂತ ಮೊದಲು ನಿವೃತ್ತಿಯಾದ ಅಮೆರಿಕಾ ಅಧ್ಯಕ್ಷರಿಗೆ ಯಾವುದೇ ಸೌಲಭ್ಯ ಸಿಗ್ತಾ ಇರಲಿಲ್ಲ. ನಂತ್ರ ಅಮೆರಿಕಾ ಕಾಂಗ್ರೆಸ್ ಕಾನೂನಿನಲ್ಲಿ ತಿದ್ದುಪಡಿ ತಂದಿದ್ದು, ನಿವೃತ್ತ ಅಧ್ಯಕ್ಷರಿಗೆ ಸೌಲಭ್ಯ ನೀಡಲು ನಿರ್ಧರಿಸ್ತು. ನಿವೃತ್ತಿ ನಂತ್ರ ಬರಾಕ್ ಒಬಾಮಾ ವಾರ್ಷಿಕ 1.36 ಕೋಟಿ ಪಿಂಚಣಿ ಪಡೆಯಲಿದ್ದಾರೆ. ಕಚೇರಿ ತೊರೆಯುತ್ತಿದ್ದಂತೆ ಈ ಪಿಂಚಣಿ ಅನ್ವಯಿಸಲಿದೆ.

ಕಚೇರಿಗೆ ಜಾಗ, ಕಚೇರಿ ಸಿಬ್ಬಂದಿಗೆ ಪರಿಹಾರ, ಸಂಪರ್ಕ ಸೇವೆ, ಮುದ್ರಣ ಹಾಗೂ ಪೋಸ್ಟ್ ಗೆ ಬೇಕಾಗುವ ವೆಚ್ಚವನ್ನು 7 ತಿಂಗಳವರೆಗೆ ನೀಡಲಾಗುವುದು. ಕಚೇರಿ ಹಾಗೂ ಕಚೇರಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹಣ ಸಿಗಲಿದೆ. ಇದು ಒಂದು ಕೋಟಿಗಿಂತ ಹೆಚ್ಚಿರುವ ಹಾಗಿಲ್ಲ. ಆರಂಭದ 30 ತಿಂಗಳವರೆಗೆ ಈ ಹಣ ಸಿಗಲಿದೆ. ನಂತ್ರ ಇದನ್ನು ಒಂದು ಕೋಟಿಯಿಂದ 64 ಲಕ್ಷಕ್ಕೆ ಇಳಿಸಲಾಗುವುದು.

ಒಬಾಮಾ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಸರ್ಕಾರದ ಆರೋಗ್ಯ ಯೋಜನೆಯಡಿ ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ.ನಿವೃತ್ತಿಯಾದ ಮೇಲೂ ಸೀಕ್ರೆಟ್ ಸರ್ವಿಸ್ ಪ್ರೊಟೆಕ್ಷನ್ ಸಿಗಲಿದೆ. ಬರಾಕ್ ಒಬಾಮಾರಿಗೆ ಪ್ರಯಾಣ ಭತ್ಯೆ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...