alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರರ ವಿರುದ್ಧ ಧ್ವನಿಯೆತ್ತಿದ್ದ ಬಾಂಗ್ಲಾ ರಾಜಕಾರಣಿ ಹತ್ಯೆ

bnagla

ಮಂಜುರುಲ್ ಇಸ್ಲಾಮ್ ಲಿಟೊನ್, ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಶಾಸಕ. ಗೈಬಂಧ ಜಿಲ್ಲೆಯಲ್ಲಿರುವ ಮನೆಯಲ್ಲೇ ಮಂಜುರುಲ್ ಅವರನ್ನು ಹತ್ಯೆ ಮಾಡಲಾಗಿದೆ.

ಮೋಟಾರ್ ಸೈಕಲ್ ನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ಮನೆಗೆ ನುಗ್ಗಿ ಗುಂಡು ಹಾರಿಸಿ ಮಂಜುರುಲ್ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಉಗ್ರವಾದದ ವಿರುದ್ಧ ಮಂಜುರುಲ್ ಧ್ವನಿಯೆತ್ತಿದ್ರು.

ಹಾಗಾಗಿ ಇದೊಂದು ಯೋಜಿತ ಹತ್ಯೆ ಅಂತಾ ಅವಾಮಿ ಲೀಗ್ ಪಕ್ಷ ಅನುಮಾನ ವ್ಯಕ್ತಪಡಿಸಿದೆ. ಈ ಕೃತ್ಯಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆ ಅಂತಾನೂ ಹೇಳಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಉಗ್ರರ ಉಪಟಳ ಹೆಚ್ಚಾಗಿದೆ. ಅವರಿಗೆ ಐಸಿಸ್ ಉಗ್ರರಿಂದ ಬೆಂಬಲ ಸಿಗುತ್ತಿರಬಹುದು ಎನ್ನಲಾಗ್ತಿದೆ. ಹಲವು ನಾಸ್ತಿಕರು, ಜಾತ್ಯಾತೀತವಾದಿಗಳು, ಬ್ಲಾಗ್ ಬರಹಗಾರರು, ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರು ಹಾಗೂ ವಿದೇಶೀಯರನ್ನು ಹತ್ಯೆ ಮಾಡಲಾಗಿದೆ. ಮಂಜುರುಲ್ ಕೂಡ ಇಸ್ಲಾಮಿಕ್ ಭಯೋತ್ಪಾದಕರ ಟಾರ್ಗೆಟ್ ಆಗಿರಬಹುದು ಎಂಬ ಶಂಕೆ ದಟ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...