alex Certify
ಕನ್ನಡ ದುನಿಯಾ       Mobile App
       

Kannada Duniya

ಮುತ್ತಿಡುತ್ತಿದ್ದ ಜೋಡಿ ಫೋಟೋ ತೆಗೆದು ಯಡವಟ್ಟು ಮಾಡಿಕೊಂಡ ಪತ್ರಕರ್ತ

ಮಳೆ-ಪ್ರೀತಿಗೆ ನಂಟಿದೆ. ಮಳೆಯಲ್ಲಿ ಜೊತೆಯಾಗಿ ಓಡಾಡುವ ಅನೇಕ ಪ್ರೇಮಿಗಳು ನಮ್ಮ ಕಣ್ಣಿಗೆ ಕಾಣ್ತಾರೆ. ಕೆಲವರು ಪ್ರೇಮಿಗಳ ಬಗ್ಗೆ ಕಮೆಂಟ್ ಮಾಡಿದ್ರೆ ಮತ್ತೆ ಕೆಲ ಮಾಧ್ಯಮದವರು ಕ್ಯಾಮರಾದಲ್ಲಿ ಸದ್ದಿಲ್ಲದೆ ಜೋಡಿಯ ರೋಮ್ಯಾನ್ಸ್ ಸೆರೆ ಹಿಡಿಯುತ್ತಾರೆ. ವ್ಯಕ್ತಿಯೊಬ್ಬನ ಖಾಸಗಿ ಜೀವನದಲ್ಲಿ ನುಸುಳುವ ಹಕ್ಕು ಮಾಧ್ಯಮಗಳಿಗೆ ಎಷ್ಟಿದೆ ಎಂಬ ಪ್ರಶ್ನೆ ಆಗಾಗ ಕೇಳಿ ಬರ್ತಿರುತ್ತದೆ. ಈಗ ಇಂಥದ್ದೇ ಒಂದು ಪ್ರಶ್ನೆ ಬಾಂಗ್ಲಾದಲ್ಲಿ ಶುರುವಾಗಿದೆ.

ಬಾಂಗ್ಲಾದ ಢಾಕಾ ವಿಶ್ವವಿದ್ಯಾನಿಲಯದ ಬಳಿ ಮಳೆಯಲ್ಲಿ ತಮ್ಮನ್ನು ತಾವು ಮರೆತಿದ್ದ ಪ್ರೇಮಿಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಮುತ್ತಿಡುತ್ತಿದ್ದ ಪ್ರೇಮಿ ಫೋಟೋವನ್ನು ಪತ್ರಕರ್ತ ತೆಗೆದಿದ್ದಾನೆ. ಅದನ್ನು ಪ್ರಕಟಿಸುವಂತೆ ಕಚೇರಿಗೆ ಕಳುಹಿಸಿದ್ದ ಎನ್ನಲಾಗಿದೆ. ಆದ್ರೆ ಹಿರಿಯ ಪತ್ರಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಫೇಸ್ಬುಕ್ ಹಾಗೂ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿದ್ದಾನೆ ಪತ್ರಕರ್ತ.

ಈ ಫೋಟೋ ಚರ್ಚೆಗೆ ಕಾರಣವಾಗಿದೆ. ಅನೇಕರು ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಡುತ್ತಿರುವ ಜೋಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಪತ್ರಕರ್ತನ ವಿರುದ್ಧ ಕಿಡಿಕಾರಿದ್ದಾರೆ. ಇದೇ ವಿಚಾರಕ್ಕೆ ಪತ್ರಕರ್ತ ಕೆಲಸ ಕಳೆದುಕೊಂಡಿದ್ದಾನೆ. ಪ್ರೀತಿ ದೃಷ್ಟಿಯಿಂದ ಈ ಫೋಟೋ ತೆಗೆದೆ. ಇದ್ರಲ್ಲಿ ಯಾವುದೇ ಅಶ್ಲೀಲವಿಲ್ಲವೆಂದು ಪತ್ರಕರ್ತ ಹೇಳ್ತಿದ್ದು, ಕೋರ್ಟ್ ಮೊರೆ ಹೋಗುವ ನಿರ್ಧಾರಕ್ಕೆ ಬಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...