alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿಯಲ್ಲಿ 60 ವರ್ಷಗಳ ನಂತ್ರ ಮಹಿಳೆಯರಿಗೆ ಸಿಕ್ತು ಈ ಸ್ವಾತಂತ್ರ್ಯ

ಸೌದಿ ಅರೇಬಿಯಾ ಮಹಿಳೆಯರಿಗೆ ಜೂನ್ 24 ಐತಿಹಾಸಿಕ ದಿನವಾಗಿದೆ. ರಸ್ತೆಯಲ್ಲಿ ಮಹಿಳೆಯರು ವಾಹನ ಚಲಾಯಿಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಸೌದಿ ಅರೇಬಿಯಾದಲ್ಲಿ ಮಹಿಳಾ ಚಾಲನೆಗೆ ಹೇರಿದ್ದ ನಿಷೇಧವನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಮಹಿಳಾ ಚಾಲನೆ ನಿಷೇಧ ರದ್ದುಗೊಳಿಸಿದ ವಿಶ್ವದ ಕೊನೆ ದೇಶವಾಗಿದೆ ಸೌದಿ ಅರೇಬಿಯಾ. ಈವರೆಗೆ ಮಹಿಳಾ ಚಾಲನೆಗೆ ನಿಷೇಧ ಹೇರಿದ್ದ ವಿಶ್ವದ ಏಕೈಕ ರಾಷ್ಟ್ರವಾಗಿತ್ತು ಸೌದಿ.

ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದ್ದು ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಕಳೆದ 60 ವರ್ಷಗಳಿಂದ ಮಹಿಳೆಯರು ಪ್ರಯಾಣಿಕರ ಸೀಟಿನಲ್ಲಿ ಮಾತ್ರ ಕಳಿತುಕೊಳ್ಳಬಹುದಿತ್ತು. ಆದ್ರೀಗ ಚಾಲನೆಗೆ ಸ್ವಾತಂತ್ರ್ಯ ಸಿಕ್ಕಿದೆ. ದೇಶದ 1.51 ಕೋಟಿ ಮಹಿಳೆಯರಿಗೆ ವಾಹನ ಚಾಲನೆ ಮಾಡುವ ಸ್ವಾತಂತ್ರ್ಯ ಸಿಕ್ಕಿದೆ.

2017ರಲ್ಲಿಯೇ ನಿಷೇಧ ರದ್ದುಕೊಳಿಸುವುದಾಗಿ ಹೇಳಿಕೆ ನೀಡಲಾಗಿತ್ತು. 2018 ರಲ್ಲಿ ಸರ್ಕಾರ ಇದನ್ನು ಜಾರಿಗೆ ತಂದಿದೆ. ಮಿಷನ್ 2030 ರ ಕಾರ್ಯಕ್ರಮದಲ್ಲಿ ಇದೂ ಒಂದಾಗಿದೆ. ಸೌದಿ ಜನರು ತೈಲದ ಹೊರತು ಬೇರೆ ಆರ್ಥಿಕ ಮೂಲ ಹುಡುಕಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಅನೇಕ ಬದಲಾವಣೆಗಳನ್ನು ತರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...