alex Certify
ಕನ್ನಡ ದುನಿಯಾ       Mobile App
       

Kannada Duniya

1,700 ಕಿ.ಮೀ. ಸಂಚರಿಸಿದ ಹೀಲಿಯಂ ಬಲೂನ್

ತನ್ನ ತಂದೆಯ ಮೊದಲ ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಹೀಲಿಯಂ ಬಲೂನ್‌ ಅನ್ನು ಗಾಳಿಯಲ್ಲಿ ತೇಲಿಬಿಟ್ಟ ಇಂಗ್ಲೆಂಡ್‌ ಮಹಿಳೆಯೊಬ್ಬರಿಗೆ, ಅದು ಕೆಲ ದಿನಗಳ ಬಳಿಕ ಪೋಲೆಂಡ್ ತಲುಪಲಿದೆ ಎಂಬ ಅರಿವು ಇರಲಿಲ್ಲ.

ನೆಲ ಹಾಗೂ ಸಮುದ್ರವನ್ನು ದಾಟಿದ ಬಲೂನ್‌ 1,700 ಕಿಮೀ ದಾಟಿ, ಪೋಲೆಂಡ್‌ನ ರೈತರೊಬ್ಬರಿಗೆ ಸಿಕ್ಕಿದೆ.

ನಿಕೋಲಾ ಬೌಲರ್‌ ಎಂಬ ನರ್ಸ್‌ ಹಾಗೂ ಆಕೆಯ ಪತಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಕ್ಷತ್ರ ರೂಪದ ಕೆಲ ಹೀಲಿಯಂ ಬಲೂನ್ ಗಳನ್ನು ಹಾರಿಬಿಟ್ಟಿದ್ದರು. ತನ್ನ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರೂ, ಅವರನ್ನು ಮರೆತಿಲ್ಲ ಎಂಬ ಸಂದೇಶವನ್ನು ಈ ಬಲೂನ್‌ಗಳು ಹೊತ್ತೊಯ್ದಿದ್ದವು.

ಬಲೂನ್ ಹಿಂಬದಿಯಲ್ಲಿ ತನ್ನ ದೂರವಾಣಿ ಸಂಖ್ಯೆಯನ್ನು ಬರೆದಿದ್ದ ನಿಕೋಲಾ, “ನನ್ನ ತಂದೆ ಎಷ್ಟು ದೂರ ಚಲಿಸಿದ್ದಾರೆ ಎಂದು ದಯವಿಟ್ಟು ನನಗೆ ಸಂದೇಶದ ಮೂಲಕ ತಿಳಿಸಿ” ಎಂದು ಬರೆದಿದ್ದರು. ಅವರಿಗೆ 1700 ಕಿ.ಮೀ.ನಿಂದ ಬಲೂನ್ ತಲುಪಿದ ಸಂದೇಶ ಬಂದಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...