alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಇಂಡಿಯಾ ವಿಮಾನದಲ್ಲಿ ಭರ್ಜರಿ ‘ಭಲ್ಲೆ ಭಲ್ಲೆ’

8 ವರ್ಷಗಳ ಬಳಿಕ ಏರ್ ಇಂಡಿಯಾ, ಪಂಜಾಬಿನ ಅಮೃತಸರ ಹಾಗೂ ಬರ್ಮಿಂಗ್ ಹ್ಯಾಮ್ ನಡುವೆ ತಡೆ ರಹಿತ ನೇರ ವಿಮಾನ ಸಂಚಾರ ಆರಂಭಿಸಿದ್ದು, ಮಂಗಳವಾರದಂದು ಪ್ರಥಮ ಸಂಚಾರದ ವೇಳೆ ವಿಮಾನದಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಭಾರತೀಯ ಡ್ರಮ್ಮರ್ ಗಳು ಹಾಗೂ ನೃತ್ಯಗಾರರು ವಿಮಾನದಲ್ಲಿ ಪ್ರಯಾಣಿಕರಿಗೆ ಹಾಡಿನ ಮೂಲಕ ಸ್ವಾಗತ ಕೋರಿದ್ದಾರೆ.

ಕೆಲ ಪ್ರಯಾಣಿಕರು ಡ್ರಮ್ ಸದ್ದು ಹಾಗೂ ಹಾಡಿಗೆ ತಮ್ಮ ಕಾಲು ಕುಣಿಸಿದ್ದಾರೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆದ ಈ ವಿಡಿಯೋವನ್ನು ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

ಅಮೃತಸರದಿಂದ ಬರ್ಮಿಂಗ್ ಹ್ಯಾಮ್ ಗೆ ಏರ್ ಇಂಡಿಯಾದ ಬೋಯಿಂಗ್ 787 ವಿಮಾನ ವಾರಕ್ಕೆರಡು ಬಾರಿ ಸಂಚರಿಸುತ್ತಿದ್ದು, ಮಂಗಳವಾರ ಹಾಗೂ ಗುರುವಾರ ಇದಕ್ಕೆ ನಿಗದಿಪಡಿಸಲಾಗಿದೆ.

Dosto Yesterday Tuesday 20th Feb was a great day we Dhol Blasters doing the opening & performing inside the Air India flight & on the runway for the non-stop flight from Birmingham to Amritsar – Here we are Entertaining passengers before the take off to Amritsar ji.

Posted by Dhol Blasters on Wednesday, February 21, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...