alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಕನಿಯಲ್ಲಿ ಸಿಕ್ಕಿಬಿದ್ದ ಮಗುವಿಗೆ ರಕ್ಷಣೆ ನೀಡಿದ್ಲು ಪಕ್ಕದ ಮನೆ ಹುಡುಗಿ

_419995126china2-ll

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಅಪ್ಪ-ಅಮ್ಮನಿಗೆ ಒಂದು ಜವಾಬ್ದಾರಿ ಕೆಲಸ. ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕಣ್ಣು ತಪ್ಪಿ ಯಡವಟ್ಟುಗಳಾಗಿಬಿಡುತ್ತವೆ. ಹಾಗಿರುವಾಗ ಮನೆಯಲ್ಲಿಯೇ ಮಗುವನ್ನು ಬಿಟ್ಟು ಅಪ್ಪ- ಅಮ್ಮ ಹೊರಗೆ ಹೋದ್ರೆ ಕೇಳಬೇಕಾ. ಆಪತ್ತನ್ನು ಸೆರಗಿಗೆ ಕಟ್ಟಿಕೊಂಡಂತೆ. ಚೀನಾದಲ್ಲಿ ಮೂರು ವರ್ಷದ ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದ ಪಾಲಕರು ಈಗ ಪಶ್ಚಾತಾಪ ಪಡುತ್ತಿದ್ದಾರೆ.

ಎರಡನೇ ಮಹಡಿಯ ಮೇಲೆ ವಾಸಿಸುವ ಪಾಲಕರು ಕೆಲಸದ ಮೇಲೆ ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ಮನೆಯಿಂದ ಹೊರಗೆ ಬಂದ ಮೂರು ವರ್ಷದ ಮಗು ಬಾಲ್ಕನಿಗೆ ಹಾಕಿರುವ ಸರಳಿನೊಳಗೆ ಸಿಲುಕಿಕೊಂಡಿದೆ. ಮಗುವಿನ ಕೂಗು ಕೇಳಿಸಿಕೊಂಡ ಪಕ್ಕದ ಮನೆಯಾಕೆ ಓಡಿ ಬಂದಿದ್ದಾಳೆ.

ಮೊದಲನೇ ಮಹಡಿಗೆ ಹಾಕಿದ್ದ ಶೆಲ್ಟರ್ ಹತ್ತಿ ಮಗುವನ್ನು ಹಿಡಿದುಕೊಂಡಿದ್ದಾಳೆ. ಇದರಿಂದಾಗಿ ಮಗುವಿಗೆ ಗಾಯಗಳಾಗಿಲ್ಲ. ತಕ್ಷಣ ಉಳಿದವರು ರಕ್ಷಣಾ ಪಡೆಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಗೆ ಬಂದ ಸಿಬ್ಬಂದಿ ಹರಸಾಹಸಪಟ್ಟು ಮಗುವನ್ನು ರಕ್ಷಿಸಿದ್ದಾರೆ. ಪಾಲಕರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...