alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕನ್ ಎಂದುಕೊಂಡು ಚಪ್ಪರಿಸಿ ತಿಂದಿದ್ದೇನು..?

dog

ಬಾಲಿ ಜಗತ್ತಿನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಇಂಡೋನೇಷ್ಯಾದ ಅತಿ ಸುಂದರ ಬಾಲಿ ದ್ವೀಪ ಅತ್ಯದ್ಭುತ ಹನಿಮೂನ್ ತಾಣವೂ ಹೌದು. ಆದ್ರೀಗ ಬಾಲಿಯಲ್ಲಿ ಬೌಬೌ ಬಿರಿಯಾನಿ ಹಾವಳಿ ಹೆಚ್ಚಾಗಿದೆ. ಚಿಕನ್ ಹೆಸರಲ್ಲಿ ಪ್ರವಾಸಿಗರಿಗೆ ನಾಯಿ ಮಾಂಸದ ಖಾದ್ಯಗಳನ್ನು ಕೊಡ್ತಾ ಇರೋದು ಬಹಿರಂಗವಾಗಿದೆ.

ಬೀದಿ ನಾಯಿಗಳನ್ನು ಹಿಡಿದು ಕೊಂದು ಮಾಂಸದ ಅಂಗಡಿಗಳಿಗೆ ಮಾರಾಟ ಮಾಡುವ ದೊಡ್ಡ ದಂಧೆಯೇ ಇಲ್ಲಿ ನಡೆಯುತ್ತಿದೆ. ಚೀನಾಗಿಂತಲೂ 7 ಪಟ್ಟು ಹೆಚ್ಚು ಶ್ವಾನಗಳನ್ನು ಇಲ್ಲಿ ಸಂಹಾರ ಮಾಡಿ, ಪ್ರವಾಸಿಗರಿಗೆ ಅದೇ ಮಾಂಸವನ್ನು ಕೊಟ್ಟು ವಂಚಿಸಲಾಗುತ್ತಿದೆ.

balinese-dog-meat-seller

ಸ್ಟ್ರೀಟ್ ಫುಡ್ ಮಳಿಗೆಗಳಲ್ಲೆಲ್ಲ ಚಿಕನ್ ಎಂದು ಹೇಳಿಕೊಂಡು ನಾಯಿ ಮಾಂಸದ ತಿನಿಸುಗಳನ್ನೇ ಮಾರಾಟ ಮಾಡಲಾಗ್ತಿದೆ. ಬಾಲಿಯ 70 ರೆಸ್ಟೋರೆಂಟ್ ಗಳು ಬೌಬೌ ಬಿರಿಯಾನಿ ಮಾಡ್ತಾ ಇರೋದು ತನಿಖೆಯಲ್ಲಿ ಬಯಲಾಗಿದೆ. ಪ್ರತಿ ವರ್ಷ ಕನಿಷ್ಟ 70,000 ನಾಯಿಗಳನ್ನು ಮಾಂಸಕ್ಕಾಗಿಯೇ ಹತ್ಯೆ ಮಾಡಲಾಗ್ತಿದೆ.

ಮಾಂಸಕ್ಕಾಗಿ ನಾಯಿಗಳಿಗೆ ವಿಷ ಕೊಟ್ಟು ಕೊಲ್ಲಲಾಗ್ತಾ ಇದೆ. ಆ ವಿಷಯುಕ್ತ ಮಾಂಸದ ಖಾದ್ಯವೇ ಪ್ರವಾಸಿಗರ ಹೊಟ್ಟೆ ಸೇರ್ತಾ ಇದೆ. ಇದರಿಂದ ಜೀವಕ್ಕೂ ಅಪಾಯವಿದೆ ಎನ್ನುತ್ತಾರೆ ತಜ್ಞರು. ಉಸಿರಾಟದ ತೊಂದರೆ, ಮಾಂಸಖಂಡಗಳಲ್ಲಿ ನೋವು, ನರದೌರ್ಬಲ್ಯ ಸೇರಿದಂತೆ ಅನೇಕ ತೊಂದರೆಗಳು ಕೂಡ ಉಂಟಾಗುತ್ತವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...