alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಗನ ಎದುರೇ ಪತ್ರಕರ್ತೆಯ ಭೀಕರ ಹತ್ಯೆ

journalist

ಬಹ್ರೇನ್ ನಲ್ಲಿ ಗುಂಡು ಹಾರಿಸಿ ಪತ್ರಕರ್ತೆಯೊಬ್ಬಳನ್ನು ಹತ್ಯೆ ಮಾಡಲಾಗಿದೆ. ಈ ಭೀಕರ ಕೃತ್ಯಕ್ಕೆ ಆಕೆಯ 6 ವರ್ಷದ ಮಗ ಸಾಕ್ಷಿಯಾಗಿದ್ದಾನೆ. ಕಾರಿನಲ್ಲಿ ಕುಳಿತಿದ್ದ ಬಾಲಕನ ಕಣ್ಣೆದುರೇ ತಾಯಿಯನ್ನು ಕೊಲ್ಲಲಾಗಿದೆ.

ಈ ಕೃತ್ಯ ಎಸಗಿದಾತ ಸಾಮಾನ್ಯ ವ್ಯಕ್ತಿಯೇನಲ್ಲ. ಬಹ್ರೇನ್ ನ ರಾಜಮನೆತನಕ್ಕೆ ಸೇರಿದ ವ್ಯಕ್ತಿ, 28 ವರ್ಷದ ಶಿಯಾ ಮಹಿಳೆ ಎಮನ್ ಸಲೇಹಿಯನ್ನು ಹತ್ಯೆ ಮಾಡಿದ್ದಾನೆ.

ನೀಲಿ ಕಣ್ಣಿನ ಸಲೇಹಿ ಸ್ನೇಹ ಜೀವಿಯಾಗಿದ್ಲು, ಬಹ್ರೇನ್ ನ ಸ್ಥಳೀಯ ವಾಹಿನಿಯಲ್ಲಿ ಕ್ರೀಡಾ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ಲು. ತನ್ನ ಮಗನೊಂದಿಗೆ ರಿಫ್ಫಾ ನಗರಕ್ಕೆ ಸಲೇಹಿ ಬಂದಿದ್ಲು.

ಈ ಪ್ರದೇಶ ಅಲ್ ಖಲೀಫಾ ಹಾಗೂ ಸೇನೆಯ ವಶದಲ್ಲಿದೆ. ವ್ಯಕ್ತಿಯೊಬ್ಬ ಆಕೆಯ ತಲೆಗೇ ಗುಂಡು ಹಾರಿಸಿದ್ದಾನೆ. ಬಹ್ರೇನ್ ನ ಆಂತರಿಕ ಸಚಿವಾಲಯ ಈ ಕೊಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ದೇಶದ ಖಾಸಗಿ ಪತ್ರಿಕೆ ಹಾಗೂ ವಾಹಿನಿಗಳು ಹಂತಕನ ವಿವರವನ್ನು ಬಯಲು ಮಾಡಿವೆ. ರಾಜಮನೆತನಕ್ಕೆ ಸೇರಿದ ವ್ಯಕ್ತಿಯೇ ಪತ್ರಕರ್ತೆಯನ್ನು ಕೊಲೆಗೈದಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...