alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ನಿರ್ಮಾಣವಾಗ್ತಿದೆ ವಿಶ್ವದ ಅತಿ ದೊಡ್ಡ ಥೀಮ್ ಪಾರ್ಕ್

ಬೆಹರಿನ್ ನಲ್ಲಿ ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಥೀಮ್ ಪಾರ್ಕ್ ನ್ನ ಸಮುದ್ರದ ಅಡಿಯಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.

ಸಮುದ್ರದ ಅಡಿಯಲ್ಲಿ 1 ಲಕ್ಷ ಸ್ಕ್ವೇರ್ ಮೀಟರ್ ಅಳತೆಯಷ್ಟು ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಒಂದು ಬೋಯಿಂಗ್ 747 ವಿಮಾನವನ್ನ ನಿಲ್ಲಿಸಲು ಸಹ ಯೋಜನೆ ಹಾಕಲಾಗಿದೆ.

ಥೀಮ್ ಪಾರ್ಕ್ ಗೆ ಎಲ್ಲಾ ವಯಸ್ಸಿನ ಪ್ರವಾಸಿಗರನ್ನ ಸೆಳೆಯಲು ಯೋಜಿಸಲಾಗುತ್ತಿದ್ದು, ಇಲ್ಲಿ ಬೋಯಿಂಗ್ ವಿಮಾನವನ್ನ ನಿಲ್ಲಿಸಲು ಮಾಮೂಲಿ ಬೋಯಿಂಗ್ ವಿಮಾನಕ್ಕಿಂತ ಭಿನ್ನವಾಗಿ ರಚಿಸಿ ನಿಲ್ಲಿಸಲಾಗುತ್ತಿದೆ. ಆಗಸ್ಟ್ ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇದರ ರಚನೆ ಈಗಿಂದಲೇ ನಡೆಸಲಾಗುತ್ತಿದೆ.

ಈ ಥೀಮ್ ಪಾರ್ಕ್ ಬೆಹರಿನ್ ನಲ್ಲಿರುವ ಸಾಂಪ್ರದಾಯಿಕ ಕಟ್ಟಡಗಳಾದ ಬೆಹರಿನ್ ಪರ್ಲ್ಸ್ ಹೌಸ್ ಮತ್ತು ಕೋರಲ್ ರೀಫ್ ನ ವೈಶಿಷ್ಟ್ಯಗಳನ್ನ ಹೊಂದಿದೆ. ಸಮುದ್ರದ ಪರಿಸರ ವ್ಯವಸ್ಥೆಯನ್ನ ಪುನರ್ಜೀವನಗೊಳಿಸುವ ಉದ್ದೇಶವೂ ಇದರಲ್ಲಿ ಅಡಗಿದ್ದು, ಇದನ್ನು ಅಂತರಾಷ್ಟ್ರೀಯ ಪರಿಸರ ಸ್ನೇಹಿ ವಾತಾವರಣದಲ್ಲಿ ನಿರ್ಮಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...