alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಗಿಂತ ಖತರ್ನಾಕ್ ಕೆಟ್ಟ ಬಾಸ್…!

ಕಚೇರಿಯಲ್ಲಿ ಬಾಸ್ ಚೆನ್ನಾಗಿದ್ರೆ ಕಷ್ಟದ ಕೆಲಸವನ್ನು ಕೂಡ ಸುಲಭವಾಗಿ ಮಾಡಬಹುದು. ಅದೇ ಬಾಸ್ ಕಿರಿಕಿರಿ ಹೆಚ್ಚಾದ್ರೆ ಒತ್ತಡ, ಖಿನ್ನತೆ ಕಾಡುತ್ತದೆ. ಕ್ವಾರ್ಟ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯೊಂದು ಇದನ್ನು ಸ್ಪಷ್ಟಪಡಿಸಿದೆ. ಅಮೆರಿಕಾದ ಶೇಕಡಾ 75ರಷ್ಟು ಮಂದಿ ಒತ್ತಡ, ಖಿನ್ನತೆಗೆ ಬಾಸ್ ಕಾರಣವೆಂದು ವರದಿಯಲ್ಲಿ ಹೇಳಲಾಗಿದೆ.

ಒಂದು ಸಿಗರೇಟ್ ಗಿಂತ ಕೆಟ್ಟ ಬಾಸ್ ಖತರ್ನಾಕ್ ಎಂದು ವರದಿಯಲ್ಲಿ ಹೇಳಲಾಗಿದೆ. ನಿಮ್ಮ ಮೇಲೆ ಒತ್ತಡ ಹೇರುವ ವ್ಯಕ್ತಿ ಜೊತೆ ಅತಿ ಹೆಚ್ಚು ಸಮಯವನ್ನು ನೀವು ಕಳೆಯುತ್ತಿದ್ದರೆ ಅದು ನಿಮ್ಮ ದೇಹ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ.

ಶೇಕಡಾ 75ರಷ್ಟು ಅಮೆರಿಕನ್ನರು ಬಾಸ್ ಕಾರಣಕ್ಕೆ ಹೆಚ್ಚು ಒತ್ತಡಕ್ಕೆ ಒಳಗಾಗ್ತೇವೆಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಾಸ್ ಒತ್ತಡಕ್ಕೆ ಕಾರಣವಾದ್ರೂ ಕೆಲಸ ಬಿಡಲು ಸಾಧ್ಯವಿಲ್ಲವೆಂದು ಶೇಕಡಾ 59 ರಷ್ಟು ಮಂದಿ ಹೇಳಿಕೆ ನೀಡಿದ್ದಾರೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸಂಶೋಧಕರು ಮತ್ತು ಯುನೈಟೆಡ್ ಸ್ಟೇಟ್ಸ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 200ಕ್ಕೂ ಹೆಚ್ಚು ಅಧ್ಯಯನದ ಮಾಹಿತಿ ಸಂಗ್ರಹಿಸಿದ್ದಾರೆ. ಸಿಗರೇಟ್ ಆರೋಗ್ಯದ ಮೇಲೆ ಪರಿಣಾಮ ಬೀರುವುದಕ್ಕಿಂತ ಹೆಚ್ಚು ಒತ್ತಡ ದುಷ್ಪರಿಣಾಮ ಬೀರುತ್ತದೆ ಎಂದು  ಅಧ್ಯಯನ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...