alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವನ್ನೇ ಗೆದ್ದು ಬಂದಿದೆ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಗು

ನಿಜಕ್ಕೂ ಇದು ವೈದ್ಯಕೀಯ ಲೋಕದ ಪವಾಡ. ತೀರಾ ವಿಚಿತ್ರ ಸಮಸ್ಯೆಯಿಂದ ಬಳಲ್ತಾ ಇದ್ದ ಮಗು ಸಾವನ್ನೇ ಗೆದ್ದು ಬಂದಿದೆ. ವ್ಯಾನೆಲ್ಲೋಪ್ ಹೋಪ್ ಎಂಬ ಮಗುವಿಗೆ ಹೃದಯ ದೇಹದ ಹೊರಭಾಗದಲ್ಲಿತ್ತು. ತಾಯಿ 9 ವಾರಗಳ ಗರ್ಭಿಣಿಯಾಗಿದ್ದಾಗ್ಲೇ ಮಗುವಿಗೆ ಈ ಸಮಸ್ಯೆ ಇದೆ ಅನ್ನೋದು ಗೊತ್ತಾಗಿತ್ತು.

ಇದನ್ನು ಎಕ್ಟೋಪಿಯಾ ಕಾರ್ಡಿಸ್ ಎಂದು ಕರೆಯಲಾಗುತ್ತದೆ. ಮಗು ಬದುಕುವ ಸಾಧ್ಯತೆ ಕಡಿಮೆ, ಜೊತೆಗೆ ಕೆಲವೊಂದು ಅಂಗವೈಕಲ್ಯಗಳು ಉಂಟಾಗಬಹುದು. ಹಾಗಾಗಿ ಗರ್ಭಪಾತ ಮಾಡಿಸಿಕೊಳ್ಳುವುದು ಉತ್ತಮ ಅಂತಾ ವೈದ್ಯರು ಸಲಹೆ ನೀಡಿದ್ದರು. ಆದ್ರೆ ಪೋಷಕರು ಮಾತ್ರ ಅದಕ್ಕೆ ಒಪ್ಪಲಿಲ್ಲ.

ಮಗುವಿಗೆ ಹೃದಯ ದೇಹದ ಹೊರಭಾಗದಲ್ಲಿದೆ ಅನ್ನೋದನ್ನು ಬಿಟ್ರೆ ಇನ್ಯಾವುದೇ ಸಮಸ್ಯೆಯಿಲ್ಲ ಅಂತಾ ಡಾಕ್ಟರ್ ಫ್ರಾನ್ಸೆಸ್ ಬುಲಾಕ್ ಸ್ಪಷ್ಟಪಡಿಸಿದ್ದರು. ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಲಾಯ್ತು. ನಂತರ 50 ವೈದ್ಯರ ತಂಡ ಮೂರು ಶಸ್ತ್ರಚಿಕಿತ್ಸೆಯನ್ನು ನಡೆಸಿ, ಮಗುವಿನ ಹೃದಯವನ್ನು ಒಳಭಾಗದಲ್ಲಿ ಜೋಡಿಸಿದೆ. ಮೂರು ವಾರಗಳ ಮಗು ವ್ಯಾನೆಲ್ಲೋಪ್ ಈಗ ಸಂಪೂರ್ಣ ಆರೋಗ್ಯವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...