alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡ್ಗಿಚ್ಚಿನ ಮಧ್ಯೆ ಎಳೆ ಮಗಳೊಂದಿಗೆ ಹಾಡುತ್ತಾ ಕಾರಲ್ಲಿ ಪಾರಾದ ಈ ವ್ಯಕ್ತಿ…!

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಹಬ್ಬಿತ್ತು. ಪ್ಯಾರಡೈಸ್ ಎಂಬ ಪಟ್ಟಣ ಸಂಪೂರ್ಣವಾಗಿ ದಹನವಾಯಿತು. ಈ ವೇಳೆ ಪ್ಯಾರಡೈಸ್‌ ನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ಕಾಡ್ಗಿಚ್ಚಿನ ಆ ಹೊಗೆಯ ಮಧ್ಯೆಯೇ ಕಾರು ಚಲಾಯಿಸಿಕೊಂಡು ಬಂದು ಪಾರಾಗಿದೆ.

ಜೋ ಅಲೆನ್ ತನ್ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಎಳೆ ಮಗಳೊಂದಿಗೆ, ಬೇಬಿ, ಇಟ್ ವಿಲ್ ಬಿ ಆಲ್ ರೈಟ್ ಎಂದು ಹಾಡು ಹೇಳುತ್ತಾ ಕಾರು ಚಲಾಯಿಸಿದರಂತೆ. ಮಗಳೊಂದಿಗೆ ಹಾಡು ಹೇಳುತ್ತಾ ಬರುವಾಗ ನನಗೆ ಆ ಬೆಂಕಿಯು ಮಳೆಯಂತೆ ಭಾಸವಾಯಿತು ಎನ್ನುತ್ತಾರೆ ಅವರು.

ತಮ್ಮ ಮನೆಯೂ ಸೇರಿ ನಗರವಿಡೀ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗುತ್ತದೆ ಎಂದು ತಿಳಿದಾಕ್ಷಣ ಅಲೆನ್ ಕುಟುಂಬ ಎರಡು ಕಾರುಗಳಲ್ಲಿ ಅಲ್ಲಿಂದ ಪಾರಾಯಿತು. ಪತ್ನಿ ವೈಟ್ನೀ 8 ತಿಂಗಳ ಮಗಳು ಜಾರ್ಡನ್ ಜತೆಗೆ ಒಂದು ಕಾರಲ್ಲಿ ಹೊರಟರೆ, ಅಲೆನ್ 3 ವರ್ಷದ ಮಗಳು ಒಲಿವಿಯಾ ಜತೆಗೆ ಇನ್ನೊಂದು ಕಾರಲ್ಲಿ ಹೊರಟಿದ್ದರು.

ಈ ಕಾಡ್ಗಿಚ್ಚಿನಿಂದಾಗಿ 11 ಜನರು ಮೃತಪಟ್ಟಿದ್ದಾರೆ. 6,000ಕ್ಕೂ ಹೆಚ್ಚು ಮನೆಗಳು ಭಸ್ಮಗೊಂಡಿವೆ. ಸಾವಿರಾರು ಕುಟುಂಬಗಳು ಸಂತ್ರಸ್ತಗೊಂಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...