alex Certify
ಕನ್ನಡ ದುನಿಯಾ       Mobile App
       

Kannada Duniya

ನವಜಾತ ಶಿಶುವಿಗೆ 100ಕ್ಕೂ ಹೆಚ್ಚು ಬಾರಿ ಕಚ್ಚಿದೆ ಇಲಿ

637_1infant_newborn_little_hands_photography_denver

ಮಂಗೋಲಿಯಾದಲ್ಲಿ ನವಜಾತ ಶಿಶುವಿಗೆ ಇಲಿಗಳು ನೂರಕ್ಕೂ ಹೆಚ್ಚು ಬಾರಿ ಕಚ್ಚಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಶಿಶುವಿನ ತಾಯಿ ಎರಿಕಾ ಶೈರಾಕ್ ಗೆ ಈಗ 19 ವರ್ಷ, ತಂದೆ ಚಾರ್ಲ್ಸ್ ಈಲಿಯಟ್ ಗೆ 18 ವರ್ಷ. ಮಗುವಿನ ಸುರಕ್ಷತೆ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

595501-parents

15 ದಿನಗಳ ಹೆಣ್ಣು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಕತ್ತು, ಮುಖ, ಕೈಕಾಲುಗಳು, ಹೊಟ್ಟೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಇಲಿಗಳು ಕಚ್ಚಿ ಹಾಕಿವೆ. ದೇಹದ ಮೇಲೆ 75-100 ಬಾರಿ ಇಲಿ ಕಚ್ಚಿದ ಗಾಯವಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಮಗುವಿನ ಹಣೆಯ ಮೇಲೆ ದೊಡ್ಡ ಗಾಯವಾಗಿದ್ದು, ತಲೆ ಬುರುಡೆ ಕೂಡ ಕಾಣಿಸ್ತಾ ಇತ್ತು.

ತಲೆಯ ಮೇಲೆ 1 ಇಂಚು ಆಳದ ಗಾಯವಾಗಿದೆ. ಮನೆಯಲ್ಲಿ ಇಲಿಗಳಿವೆ ಅನ್ನೋದು ಎರಿಕಾ ಹಾಗೂ ಚಾರ್ಲ್ಸ್ ಗೆ ಗೊತ್ತಿತ್ತು. ಆದ್ರೂ ಮಗುವಿನ ರಕ್ಷಣೆ ಬಗ್ಗೆ ದಂಪತಿ ಗಮನ ಹರಿಸಿರಲಿಲ್ಲ. ರಾತ್ರಿ ಮಗು ಅಳುವ ಶಬ್ಧ ಕೇಳಿ ಎರಿಕಾಗೆ ಎಚ್ಚರವಾಗಿತ್ತಂತೆ. ಬಂದು ನೋಡುವಷ್ಟರಲ್ಲಿ ಮಗುವಿನ ದೇಹ ಪೂರ್ತಿ ರಕ್ತಸಿಕ್ತವಾಗಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಅಂತಾ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...