alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟಿದ ಮಗುವಿನ ಕೈನಲ್ಲಿತ್ತು ಗರ್ಭನಿರೋಧಕ ಸಾಧನ..!

2-women-pregnant_050617030017

ಅಮೆರಿಕಾದ ಟೆಕ್ಸಾನ್ ನಿವಾಸಿ ಲೂಸಿ ಹೆಲೆನ್ ಗೆ ಇನ್ನೊಂದು ಮಗುವಾಗೋದು ಇಷ್ಟವಿರಲಿಲ್ಲ. ಹಾಗಾಗಿ ಗರ್ಭನಿರೋಧಕ ಸಾಧನವನ್ನು ಬಳಸುತ್ತಿದ್ದಳು. ಆದ್ರೆ ಆಕೆ ಅಂದುಕೊಂಡಂತೆ ಆಗ್ಲಿಲ್ಲ. ಗರ್ಭನಿರೋಧಕ ಸಾಧನ ಬಳಸಿದ್ರೂ ನಾಲ್ಕು ತಿಂಗಳಲ್ಲಿ ಆಕೆ ಗರ್ಭಿಣಿಯಾದ್ಲು.

ಹಿಂದಿನ ವಾರ ಲೂಸಿ, ಡೆಕ್ಸ್ಟರ್ ಹೆಸರಿನ ಮಗುವಿಗೆ ಜನ್ಮ ನೀಡಿದ್ದಾಳೆ. ವಿಶೇಷವೆಂದ್ರೆ ಮಗು ಗರ್ಭವಿರೋಧಕ ಸಾಧನವನ್ನು ಕೈನಲ್ಲಿ ಹಿಡಿದು ಜನಿಸಿದ್ದಾಳೆ. ಈಕೆ ಫೋಟೋ ಈಗ ವೈರಲ್ ಆಗಿದೆ. ಗರ್ಭನಿರೋಧಕ ಸಾಧನ ಕೈನಲ್ಲಿ ಹಿಡಿದಿರುವ ಮಗುವಿನ ಫೋಟೋವನ್ನು ಲೂಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ. ಈವರೆಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಈ ಫೋಟೋವನ್ನು ನೋಡಿದ್ದಾರೆ.

ಫೋಟೋ ಹಾಕಿರುವ ಲೂಸಿ ಗರ್ಭನಿರೋಧಕ ಸಾಧನ ಫೇಲ್ ಆಯ್ತು. ಇದನ್ನು ಬಳಸಿಯೂ ನಾನು ಗರ್ಭಿಣಿಯಾದೆ ಎಂದು ಬರೆದಿದ್ದಾಳೆ. ಲೂಸಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು ಈ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆಯಲಾಗಿದೆ. ಈ ವೇಳೆ ಮಗುವಿನ ಕೈನಲ್ಲಿ ಗರ್ಭನಿರೋಧಕ ಸಾಧನವಿರುವುದು ವೈದ್ಯರೊಬ್ಬರಿಗೆ ಕಾಣಿಸಿತ್ತು ಎಂದು ಲೂಸಿ ಸಂದರ್ಶನದ ವೇಳೆ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...