alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬರುತ್ತಿದ್ದಾನೆ ಮುಂಬೈ ದಾಳಿಯಲ್ಲಿ ಬದುಕುಳಿದಿದ್ದ ಬಾಲಕ

2008 ರ ನವೆಂಬರ್ 26 ರಂದು ಪಾಕ್ ಮೂಲದ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ ವೇಳೆ ಆತನಿನ್ನು 2 ವರ್ಷದ ಬಾಲಕ. ಕಣ್ಣೆದುರಿನಲ್ಲೆ ತಂದೆ, ತಾಯಿ ಇಬ್ಬರೂ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದು, ದಾದಿ ತೋರಿದ ಸಮಯೋಚಿತ ಪ್ರಜ್ಞೆಯಿಂದ ಅಪಾಯದಿಂದ ಪಾರಾಗಿದ್ದ.

ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಮೋಶೆ ಹೋಲ್ಟ್ಜ್ ಬರ್ಗ್ ಬಳಿಕ ಇಸ್ರೇಲ್ ನಲ್ಲಿ ನೆಲೆಸಿರುವ ತನ್ನ ಅಜ್ಜ, ಅಜ್ಜಿ ಬಳಿ ತೆರಳಿದ್ದು, ಈಗ ಅಲ್ಲಿಯೇ ನೆಲೆಸಿದ್ದಾನೆ.

ಇದೀಗ 9 ವರ್ಷದ ಬಾಲಕನಾಗಿರುವ ಮೋಶೆ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾ ಅವರೊಂದಿಗೆ ಬರುತ್ತಿದ್ದಾನೆ.

ಈ ವರ್ಷಾರಂಭದಲ್ಲಿ ಇಸ್ರೇಲ್ ಗೆ ತೆರಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೋಶೆ ತಮ್ಮನ್ನು ಭೇಟಿಯಾದ ವೇಳೆ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದರು. ಅದರಂತೆ ಭಾರತಕ್ಕೆ ಬರುತ್ತಿರುವ ಮೋಶೆ, ತನ್ನ ಪೋಷಕರು ವಾಸವಿದ್ದ ಹಾಗೂ ಭಯೋತ್ಪಾದಕರ ಗುಂಡಿಗೆ ಬಲಿಯಾದ ಸ್ಥಳಗಳಿಗೆ ಭೇಟಿ ನೀಡಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...