alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಮರಿಯಾನೆ ತುಂಟಾಟ

elephant-chases-birds_650x400_71498295245

ಪುಟ್ಟ ಮರಿಯಾನೆಯೊಂದು ಹಕ್ಕಿಗಳನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ವೀಡನ್ ನ ಬೋರಾಸ್ ಮೃಗಾಲಯದಲ್ಲಿ ನಡೆದ ಘಟನೆ ಇದು. ಪ್ರಾಣಿಗಳೆಲ್ಲ ಮೃಗಾಲಯದಲ್ಲಿ ಒಂದೆಡೆ ಸೇರಿದ್ವು.

ಅಮ್ಮನ ಜೊತೆ ಬಂದಿದ್ದ ಮರಿಯಾನೆಗೆ ಅಲ್ಲಿದ್ದ ಹಕ್ಕಿಗಳ ಮೇಲೆ ಕಣ್ಣು ಬಿದ್ದಿತ್ತು. ಆನೆ ಮರಿ ಹಕ್ಕಿಗಳನ್ನು ಅಟ್ಟಿಸಿಕೊಂಡು ಹೋಗಲು ಶುರು ಮಾಡಿದೆ. ಹಕ್ಕಿಗಳು ಸುತ್ತ ಹಾರಾಡಿದಂತೆ ತಾನು ಕೂಡ ಅವರ ಹಿಂದೆ ಓಡಿದೆ.

ಅಷ್ಟಕ್ಕೇ ಮರಿಯಾನೆಗೆ ತಲೆಸುತ್ತು ಬಂದುಬಿಟ್ಟಿತ್ತು. ಸುಸ್ತಾದ ಪುಟ್ಟ ಆನೆ ಅಲ್ಲೇ ಬಿದ್ದು ಬಿಟ್ಟಿದೆ. ಹೇಗೋ ಸಾವರಿಸಿಕೊಂಡು ಮೇಲೆದ್ದು ಅಮ್ಮನ ಬಳಿ ಓಡಿ ಹೋಗಿದೆ. ಮರಿಯಾನೆಗೆ ದೊಡ್ಡ ಆನೆ ಸಮಾಧಾನ ಮಾಡಿ ಪಕ್ಕಕ್ಕೆ ಕರೆದೊಯ್ದಿದೆ.

ಈ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಮರಿಯಾನೆಯ ತುಂಟಾಟ, ಅಮ್ಮ-ಮಗುವಿನ ಪ್ರೀತಿ ನೋಡಿ ಖುಷಿಪಟ್ಟಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...